ಜಿಲ್ಲೆ

ಬಿಸಿನೀರಿನ ಹೊಂಡಕ್ಕೆ ಬಿದ್ದು ಕಾರ್ಮಿಕ ಸಾವು

ಹೊಸಪೇಟೆ : ಬಿಸಿನೀರಿನ ಬಾಯ್ಲರ್ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ತಾಲೂಕಿನ ಡಣಾಪುರದ ಬಳಿಯ ಬಿಬಿಎಂ ಕಾರ್ಖಾನೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

ಕಮಲಾಪುರದ ನಿವಾಸಿ ನಾಗರಾಜ ( 39) ಮೃತ ಕಾರ್ಮಿಕ. ಜಿಕೆಎನ್ ಎಂಟರ್ ಪ್ರೈಸಸ್ ನಲ್ಲಿ ಆಪರೇಟರ್ ಆಗಿ ಕೆಲಸ ಮಾಡ್ತಿದ್ದ ನಾಗರಾಜ, ಬೆಳಗ್ಗೆ ಕೆಲಸದ ವೇಳೆ ಕಾಲುಜಾರಿ ಬಿಸಿನೀರಿನ ಬಾಯ್ಲರ್ ಹೊಂಡಕ್ಕೆ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಹೊಂಡದಲ್ಲಿ ಬಿದ್ದ ಕಾರಣ ಮೈ ಮೇಲಿನ ಚರ್ಮ ಕಳಚಿ ಸಾವನ್ನಪ್ಪಿದ್ದಾನೆ.

ಘಟನೆ ಆಗುತ್ತಿದ್ದಂತೆ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವ ವೇಳೆ ರಸ್ತೆ ಮಧ್ಯ ಮೃತಪಟ್ಟಿದ್ದಾರೆ. ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ.