ಜಿಲ್ಲೆ

ನೇತ್ರದಾನದಿಂದ ಅಂದತ್ವ ನಿವಾರಣೆ

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ಜಾಮೀಯ ಮಸ್ಜಿದ್‌ಯಿಂದ ಇಲ್ಲಿನ ಚಿತ್ತವಾಡ್ಗಿ ಶಾದಿಮಹಲ್ ಆವರಣದಲ್ಲಿ ಶನಿವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.

ಹುಡಾ ಅಧ್ಯಕ್ಷ ಎಚ್.ಏನ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಒಬ್ಬ ವ್ಯಕ್ತಿಯ ಸರಾಗವಾಗಿ ಜೀವನಕ್ಕೆ ಕಣ್ಣುಗಳು ಸಹಕಾರಿ. ಹೊರಗಿನ ಜಗತ್ತಿಗೆ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತವೆ. ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನರು ಜನ್ಮತಃ ಕುರುಡರಾಗಿ ಹುಟ್ಟುತ್ತಿದ್ದಾರೆ. ಜತೆಗೆ ಆಕಸ್ಮಿಕ ಅಪಘಾತಗಳಿಂದಾಗಿ ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂಥವರ ಜೀವನಕ್ಕೆ ನೇತ್ರದಾನಿಗಳು ಅತ್ಯವಶ್ಯಕವಾಗಿರುತ್ತಾರೆ. ಒಬ್ಬ ವ್ಯಕ್ತಿ ಮರಣದ ನಂತರ ನೇತ್ರದಾನ ಮಾಡುವುದರಿಂದ ಇಬ್ಬರ ಜೀವನಕ್ಕೆ ಬೆಳಕನ್ನು ನೀಡಿದಂತಹ ಸಾರ್ಥಕ ಜೀವನ ಅವರದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬರು ನೇತ್ರದಾನಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.

ನೇತ್ರಲಕ್ಷ್ಮಿ ವೈದ್ಯಾಲಯದ ವೈದ್ಯ ಡಾ.ಶ್ರೀನಿವಾಸ್ ದೇಶ ಪಾಂಡೆ ಮಾತನಾಡಿ, ಅನಾವಶ್ಯಕವಾಗಿ ರಾತ್ರಿ ಹೊತ್ತಿನಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ನೊಡಬಾರದು. ಇದರಿಂದ ಕಣ್ಣಿನ ಸಾಮರ್ಥ್ಯ ನಶಿಸಿ ಹೋಗುತ್ತದೆ. ಕಣ್ಣಿನ ಪೊರೆಯನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಇಲ್ಲದೇ ಔಷಧಿಗಳನ್ನು ತೆಗೆದುಕೊಳ್ಳಬಾರದು. 40 ವರ್ಷ ನಂತರ ಪ್ರತಿಯೊಬ್ಬರೂ ಕಣ್ಣಿನ ಒತ್ತಡವನ್ನು ಪರೀಕ್ಷಿಸಿಕೊಳ್ಳಬೇಕು ಹಾಗೂ ಶುಗರ್ ಬಂದವರು ಪ್ರತಿ ವರ್ಷ ಕಣ್ಣಿನ ರೆಟಿನಾವನ್ನು ತಪಾಸಣೆಗೊಳಪಡಿಸಬೇಕು ಎಂದರು.

ಪ್ರಮುಖರಾದ ಅಬುಬಕರ್, ರಫೀಕ್, ಖಾಜಾ ಹುಸಸೇನ್ ನಿಯಾಜಿ, ಚಾಂದ್ ಬಾಷ, ಇಂತಿಯಾಜ್, ಜಾಕೀರ್, ಕರೆಂಗಲಿ ನಜೀರ್, ಮೆಹಬೂಬ ಸಾಬ್, ಹಾಫಿಸಾಬ್ ಗಳಾದ ಹನೀಫ್ ಇತರರಿದ್ದರು.