ಜಿಲ್ಲೆ

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ

ಮಂಜುನಾಥ

ಹೊಸಪೇಟೆ: ಸಾವಿತ್ರಿ ಬಾಯಿ ಪುಲೆಯವರ ಜಯಂತಿ ನಿಮಿತ್ತ ಜ.12ರಂದು ಬೆಂಗಳೂರಿನಲ್ಲಿ ಉಚಿತ ಶಿಕ್ಷಣ ನಮ್ಮ ಸಂವಿಧಾನ ಬದ್ಧ ಹಕ್ಕು ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಂಚಾಲಕ ಸಣ್ಣ ಈರಪ್ಪ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಭೀಮವಾದದ ದಲಿತ ಸಂಘರ್ಷ ಸಮಿತಿಯ ಎಲ್ಲರು ಭಾಗವಹಿಸಲಿದ್ದಾರೆ. ಅಂದಾಜು 8 ಸಾವಿರ ಜನರು ಆಗಮಿಸುವ ನಿರೀಕ್ಷೆಯಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ವಿದ್ಯಾಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಲ್ಲಿ ಅವರ ಆಶಯಕ್ಕೆ ಅನುಗುಣವಾಗಿ ಶಿಕ್ಷಣದ ವ್ಯಾಪಾರೀಕರಣ ತೆರಗಟ್ಟಿ ಸರ್ವರಿಗೂ ಶಿಕ್ಷಣ ಖಾತ್ರಿಗೊಳಿಸುವ ಸಲುವಾಗಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ನಾಡಿನ ಭೀಮವಾದಿಗಳು, ಪ್ರಜ್ಞಾವಂತರು ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂವಿಧಾನ ವಿರೋಧಿ ನಡೆಗಳ ವಿರುದ್ಧ ಜನ ಜಾಗೃತಿ ರೂಪಿಸಲಾಗುವುದು ಎಂದರು.

ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ ಬಾಬು ಮಾತನಾಡಿ, ಬಡವರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣದ ವ್ಯಾಪಾರೀಕರಣದಿಂಸ ಅರ್ಧದಲ್ಲೇ ಶಿಕ್ಷಣವನ್ನು ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಭೀಮವಾದ ಸಂಘಟನೆಯಿAದ ಸಮುದಾಯದ ಬಡ ಜನರಿಗೆ ಸಹಕಾರ. ಬಡ ವಿದ್ಯಾರ್ಥಿಗಳಿಗೆ, ಸಮಿತಿಯ ಸದಸ್ಯರಾದವರಿಗೆ ನೆರವು. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು. ಉಚಿತ ಶಿಕ್ಷಣ ಕೊಡಿಸಲಾಗುವುದು ಎಂದರು.

ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ ಬಾಬು, ಸಮಿತಿಯ ಜಿಲ್ಲಾ ಸಂಚಾಲಕ ಸಿ.ರಮೇಶ್, ಎಂ.ರಾಮಕೃಷ್ಣ, ಮನೋಕ್ ಕುಮಾರ್, ಮರಿಸ್ವಾಮಿ, ಪೂರ್ಣಿಮಾ ರಮೇಶ್, ವೈ.ರಾಘವೇಂದ್ರ ಇದ್ದರು.