ಹೊಸಪೇಟೆ: ಆರೋಪಗಳು ಬಂದಾಗ ತನಿಖೆಗಳು ಸಹಾಜ. ಯಾವುದೇ ತನಿಖೆ ಬಂದರೂ ಎದುರಿಸುವೇ ಎಂದು ಬಳ್ಳಾರಿ ಸಂಸದ ಈ.ತುಕಾರಾಂ ಹೇಳಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನೆಗೆ ಇಡಿ ಅಧಿಕಾರಿಗಗಳು ಅಂದು ಬೆಳಗ್ಗೆ 5.30ಕ್ಕೆ ಮನೆಗೆ ಬಂದು ಪರಿಶೀಲನೆ ನಡೆಸಿದರು. ಅದಕ್ಕೆ ಗೌರಯುತವಾಗಿ ಅವರು ಕೇಳಿದ್ದಕ್ಕೆಲ್ಲಾ ಉತ್ತರ ಕೊಟ್ಟಿದ್ದೇವೆ. ಅವರ ಕೆಲಸ ಅವರು ಮಾಡಿದ್ದಾರೆ. ನಮ್ಮ ಕಡೆ ತಪ್ಪು ಇರದೇ ಇದ್ದಾಗ ಹೆದರುವ ಅವಶ್ಯಕತೆಯಿಲ್ಲ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ನಾನು ನಾಲ್ಕು ಬಾರಿ ಶಾಸಕ, ಈಗ ಸಂಸದನಾಗಿದ್ದೇನೆ, ಕೆಲಸ ಮಾಡ್ತಿದ್ದೇವೆ. ನಾವು ಜನರ ನಂಬಿಕೆ ಮೇಲೆ ಚುನಾವಣೆಗೆ ನಿಂತಿರೋರು. ಜನರು ನಮ್ಮನ್ನು ಗೆಲ್ಲಿಸುತ್ತಾರೆ. ಭಗವಂತ ಕಾಪಾಡುತ್ತಾನೆ. ಸಂತೋಷ್ ಲಾಡ್ ಸೇರಿದಂತೆ ಹಿರಿಯ ನಾಯಕರು, ಜನರ ಆಶೀರ್ವಾದ ಇರೋವರೆಗೆ ನಮಗೆ ಏನೂ ಆಗೋಲ್ಲ. ಕಾಯೋಕೆ ಭಗವಂತನೊಬ್ಬ ಇರ್ತಾನೆ ಎಂದರು.
ಅಹಮದಾಬಾದ್‌ನಲ್ಲಿ ವಿಮಾನ ದುರಂತ ಪ್ರಕರಣ ನಾವು ಗೊತ್ತಿಲ್ಲದೇ ಮಾತಾಡೋದು ತಪ್ಪಾಗುತ್ತದೆ. ಈಗ ಬ್ಲಾಕ್ ಬಾಕ್ಸ್ ಸಿಕ್ಕಿದೆ, ಎಲ್ಲವೂ ತನಿಖೆ ಬಳಿಕ ಗೊತ್ತಾಗುತ್ತದೆ ಎಂದರು.