ಜಿಲ್ಲೆ

ಹೊಸಪೇಟೆಯಲ್ಲಿ ನಾಯಿಗಳ ದಾಳಿಗೆ ಹಲವರಿಗೆ ಗಾಯ

ಮಂಜುನಾಥ

ಹೊಸಪೇಟೆ: ಇಲ್ಲಿನ ಎಂ.ಪಿ.ಪ್ರಕಾಶ್ ನಗರ, ಸಿದ್ದಲಿಂಗಪ್ಪ ಚೌಕಿ, ಹಾಗೂ ಚಿತ್ತವಾಡ್ಗಿಯಲ್ಲಿ ಸೋಮವಾರ ಬೀದಿ ನಾಯಿಗಳು ದಾಳಿ ಮಾಡಿದ್ದು, ಮಕ್ಕಳು ಸೇರಿದಂತೆ ಆರೇಳು ಜನರು ಗಾಯಗೊಂಡಿದ್ದಾರೆ. ನಗರದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಗರದ ಸಿದ್ದಲಿಂಪ್ಪ ಚೌಕಿಯ ಮಂಜುನಾಥ(23), ಚಿತ್ತವಾಡ್ಗಿಯ ಚಂದ್ರಿಕಾ(22), ಬಿಟಿಆರ್ ನಗರದ ಮುಬಾರಕ್ (14), ಎಂಪಿಪ್ರಕಾಶ್ ನಗರದ ಭಾವನ (13), ವಿಹಾನ್ (5), ನಯನ (5) ನಾಯಿ ದಾಳಿ ಮಾಡಿದೆ. ನಗರದಲ್ಲಿ ಒಂದೇ ದಿನಕ್ಕೆ ಮಕ್ಕಳು ಸೇರಿದಂತೆ 6 ಕ್ಕೂ ಅಧಿಕ ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಇನ್ನೂ ಸಾಕು ಪ್ರಾಣಿಗಳ ಮೇಲೂ ನಾಯಿಗಳು ಕಚ್ಚಿ ಗಾಯಗೊಳಿಸಿದೆ. ಕಳೆದ ಕೆಲ ದಿನಗಳಿಂದ ನಾನಾ ಬಡಾವಣೆಗಳಲ್ಲಿ ನಾಯಿಗಳ ಕಾಟ ವಿಪರೀತವಾಗಿದೆ.

ಪಾಲಕರ ಸಹಾಯವಿಲ್ಲದೇ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹಲವರು ಗಾಯಗೊಂಡಿದ್ದರೂ ಸಂಬAಧಿತರು ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಇನ್ನಾದರೂ ಬೀದಿ ನಾಯಿಗಳನ್ನು ನಿಯಂತ್ರಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನವು ಮಾಡಿಕೊಡಬೇಕೆನ್ನುವುದು ಸ್ಥಳೀಯ ನಿವಾಸಿಗಳ ಒತ್ತಾಸೆಯಾಗಿದೆ.