ಜಿಲ್ಲೆ

ವೈದ್ಯರ ವಿರುದ್ಧ ಪಾಲಕರ ಆಕ್ರೋಶ

ಮಂಜುನಾಥ

ಹೊಸಪೇಟೆ: ವೈದ್ಯರ ನರ‍್ಲಕ್ಷ್ಯದಿಂದ ಐದು ರ‍್ಷದ ಮಗು ಮೃತಪಟ್ಟ ಘಟನೆ ನಗರದ ರ‍್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ಕಮಲಾಪುರದ ಅಂಬೇಡ್ಕರ್ ನಗರದ ಶಾಂತಪ್ಪ ಹಾಗೂ ಶಂಕ್ರಮ್ಮ ಎಂಬ ದಂಪತಿಯ ಮಗು ಕುಶಾಲ್(05) ಮೃತಪಟ್ಟ ಮಗು. ಜ್ವರ ಎಂದು ಬೆಳಗ್ಗೆ 7 ಗಂಟೆಗೆ ಬಂದಾಗ ತರ‍್ತು ಚಿಕಿತ್ಸಾ ವರ‍್ಡ್ ನಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಲಿಲ್ಲ.

ಜ್ವರ ಹೆಚ್ಚಿದೆ ಮಕ್ಕಳ ವೈದ್ಯರು 10 ಗಂಟೆಗೆ ಬರುತ್ತಾರೆ ಎಂದು ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಚಿಕಿತ್ಸೆ ಸಿಗಲಿಲ್ಲ. ಮತ್ತೆ ರ‍್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಇದ ಒಬ್ಬ ಮಗನನ್ನು ನಾವು ಕಳೆದುಕೊಂಡೆವು ಎಂದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ್ನು ಸರಿಯಾಗಿ ಪರೀಕ್ಷಿಸದೆ ನರ‍್ಲಕ್ಷ್ಯ ತೋರುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ತಕ್ಷಣ ಚಿಕಿತ್ಸೆ ನೀಡುವುದಿಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥ ವೈದ್ಯ ಹಾಗೂ ಸಿಬ್ಬಂದಿಗೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರಗತಿಪರ ಸಂಘಟನೆಯ ಮುಖಂಡ ಕೆ.ಎಂ.ಸಂತೋಷ ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಎಚ್ಚರಿಸಲಾಗಿದೆ. ಮಗುವಿನ ಸಾವಿನ ನಿಖರ ಮಾಹಿತಿ ಪಡೆದು ಕ್ರಮಕೈಗೊಳ್ಳುವೆ. ಶಂಕರ್ ನಾಯ್ಕ, ಡಿಎಚ್ಒ, ವಿಜಯನಗರ