ಹೊಸಪೇಟೆ: ಶಾಸಕ ಪುತ್ತೂರು ಮಂಜುನಾಥ ಏನು ಮಾತಾಡಿದ್ದಾರೆ ಗೊತ್ತಿಲ್ಲ, ಅದರ ಬಗ್ಗೆ ಪ್ರತಿಕ್ರಿಯಿಸಲ್ಲ. ಏನೆಂದು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಹೊಸಪೇಟೆಯಲ್ಲಿ ಮೇ.20 ರಂದು ನಡೆಯುವ ಸರಕಾರದ ಎರಡು ವರ್ಷದ ಸಾಧನೆ ಸಂಭ್ರಮದ ಪೂರ್ವ ಸಿದ್ದತೆ ಪರಿಶೀಲನೆ ನಡೆಸಿ ಸುದ್ದಿಗೋಷ್ಟೀಯಲ್ಲಿ ಮಾತನಾಡಿದರು.
2023 ಮೇ 13ರಂದು ಒಂದು ದಿಡ್ಡ ಸಂದೇಶ ಕೊಟ್ಟಿದರು. ಕಾಂಗ್ರೆಸ್ ಮೇಲೆ ವಿಶ್ವಾಸ ನಂಬಿಕೆ ಇಟ್ಟು 136 ಸೀಟ್ ಗೆಲ್ಲಿಸಿ ಅಧಿಕಾರಕ್ಕೆ ತಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದರು. ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ಕೊಡದೇ ಕಾಂಗ್ರೆಸ್ ಗೆಲ್ಲಿಸಿದರು. ಎರಡು ವರ್ಷದ ಸಂಭ್ರಮ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಅದಕ್ಕಾಗಿ ವಿಜಯನಗರ ಆಯ್ಕೆ ಮಾಡಿಕೊಂಡು, ಹೆಚ್ಚಿಗೆ ಶಕ್ತಿ ಕೊಡಲು ಇಲ್ಲಿಂದ ಕಾರ್ಯಕ್ರಮ ಆರಂಭ ಮಾಡಿದ್ದೇವೆ. ಈ ಸಂಭ್ರಮವನ್ನ ವಿಜಯನಗರದಿಂದ ಮಾಡಲು ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ ಮೇ 20ರಂದು ಕಾರ್ಯಕ್ರಮ ಮಾಡ್ತಿದ್ದೇವೆ. ತಾಂಡಾ, ಹಟ್ಟಿ, ದೊಡ್ಡಿಗಳು ಸೇರಿದಂತೆ ಕೆಲವರಿಗೆ ಪಟ್ಟ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಎಲ್ಲರಿಗು ಕೊಡಲು ವಿಫಲವಾಗಿತ್ತು. ಹೀಗಾಗಿ ಒಂದು ಲಕ್ಷ ಪಟ್ಟ ಕೊಡಲು ಸಿದ್ದತೆ ಮಾಡಿಕೊಂಡಿದ್ದೇವೆ. 50 ಸಾವಿರ ಫಲಾನುಭವಿಗಳನ್ನ ಕರೆಸ್ತಿದ್ದೇವೆ. ಉಳಿದಂತೆ ನಮ್ಮ ಕಾರ್ಯಕರ್ತರು ಬರಲಿದ್ದಾರೆ ಎಂದರು.
ಪಕ್ಷ ಹಾಗೂ ಸರ್ಕಾರ ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡ್ತಿದ್ದೇವೆ. ಇಡೀ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಸಂದೇಶ ಕೊಡ್ತೇವೆ. ಒಂದು ಲಕ್ಷ ಜನರಿಗೆ ಪಟ್ಟಾ ಕೊಡೋದು ತೀರ್ಮಾನ ಮಾಡಿದ್ದೇವೆ. ನವಿಲೆ ಡ್ಯಾಂ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾವನೆ ಮಾಡಿದ್ದೇವೆ. ಈಗಾಗಲೇ ನಮ್ಮ ಟೆಕ್ನಿಕಲ್ ಟೀಂ ಒಂದು ಪ್ರಸ್ತಾವನೆ ಕೊಟ್ಟಿದ್ದಾರೆ. ಆಂದ್ರ, ತೆಲಂಗಾಣ ಸಿಎಂ ಗೆ ಈಗಾಗಲೇ ನಾನು ಮಾತಾಡಿದ್ದೇನೆ. ಹೂಳು ಎತ್ತಲು ಪ್ರೋತ್ಸಹ ಕೊಡ್ತಿಲ್ಲ. ಅದಕ್ಕಾಗಿ ನವಲಿ ಅಥವಾ ಇನ್ನೊಂದು ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದೇವೆ. ಗ್ರೆಟರ್ ಬೆಂಗಳೂರು ಅಥಾರಟಿ ಮಾಡಿದ್ದೇವೆ. ಬೆಂಗಳೂರು ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.