ಹೊಸಪೇಟೆ: ಬೆಂಬಲ ಯೋಜನೆಯಡಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಗುಣಮಟ್ಟದ ಭತ್ತ, ರಾಗಿ, ಜೋಳ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆಯಲ್ಲಿ ರೈತರಿಂದ ನೇರ ಖರೀದಿಗೆ ಸ್ಥಳೀಯ ಎಪಿಎಂಸಿಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿಗಧಿಯಾದ ದರಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಎಫ್‌ಎಕ್ಯೂ ಗುಣಮಟ್ಟದ ಕೃಷಿ ಉತ್ಪನ್ನಗಳಿಗೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಬಗ್ಗೆ ಎಲ್ಲಾ ಎಪಿಎಂಸಿಗಳಿಗೆ ವಿವರ ನೀಡಲಾಗಿದೆ. ಯಾವುದೇ ರೈತರು ಮಧ್ಯವರ್ತಿಗಳ ಮೊರೆ ಹೋಗದಂತೆ ನೇರವಾಗಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ನೊಂದಾಯಿಸಿಕೊಳ್ಳಬೇಕು ಎಂದರು.
ರಾಜ್ಯ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ಜಿ.ಕೆ.ವೆಂಕಟೇಶ್, ಕಾನೂನು ಮಾಪನಶಾಸ್ತç ಇಲಾಖೆ ಎಸಿ ಅಮೃತ್, ಆಹಾರ ಇಲಾಖೆ ಉಪನಿರ್ದೇಶಕ ರಿಯಾಜ್, ಕೃಷಿ ಇಲಾಖೆ ಉಪನಿರ್ದೇಶಕ ಶರಣಪ್ಪ ಮುದಗಲ್, ಎಪಿಎಂಸಿ ಸಿಬ್ಬಂದಿ ಸಿದ್ದಯ್ಯ ಸ್ವಾಮಿ ಇತರರಿದ್ದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ ಭತ್ತ (ಸಾಮಾನ್ಯ) 2300 ರೂ., ಗ್ರೇಡ್‌ಎ 2320 ರೂ., ಜೋಳ (ಹೈಬ್ರೀಡ್) 3371 ರೂ., ಜೋಳ (ಮಾಲ್ದಂಡಿ) 3421 ರೂ., ರಾಗಿ (ಗುಣಮಟ್ಟದ) 4290 ರೂ., ಸಜ್ಜೆ 2625 ರೂ., ಮೆಕ್ಕೆಜೋಳ 2225 ರೂ., ತೊಗರಿ 7550 ರೂ., ಹೆಸರು 8682 ರೂ., ಉದ್ದು 7400 ರೂ., ಶೇಂಗಾ (ಸಿಪ್ಪೆ ಸಹಿತ) 6783 ರೂ., ಸೂರ್ಯಕಾಂತಿ 7280 ರೂ., ಸೋಯಾಬಿನ್ 4892 ರೂ., ಎಳ್ಳು 9267 ರೂ., ಹುಚ್ಚೆಳ್ಳು 8717 ರೂ., ಹತ್ತಿ (ಮಧ್ಯಮ) 7121 ರೂ., ಹತ್ತಿ (ಉದ್ದನೆ) 7521 ರೂ. ಬೆಲೆ ನಿಗಧಿಪಡಿಸಲಾಗಿದೆ.
ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಇತರರಿದ್ದರು.