ಮಂಜುನಾಥ 
ಜಿಲ್ಲೆ

ಹೊಸಪೇಟೆಯಲ್ಲಿ ಮಹಿಳಾ ಧ್ಯಾನ ಆರೋಗ್ಯ ಯಜ್ಞ

ಹೊಸಪೇಟೆ: ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿಯಿಂದ ಮೇ.11ರ ಶನಿವಾರ ಮಹಿಳೆಯರಿಗಾಗಿ ಉಚಿತ ಧ್ಯಾನ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸೊಸೈಟಿಯ ವ್ಯವಸ್ಥಾಪಕ ಮಂಜುನಾಥ ಹೇಳಿದರು.

ಹೊಸಪೇಟೆಯ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೇ.11ರ ವಿಶ್ವ ತಾಯಂದಿರ ದಿನದ ಅಂಗವಾಗಿ ಮಾನಸಿಕ, ದೈಹಿಕವಾಗಿ ಬಳಲುವ ಮಹಿಳೆಯರಿಗೆ ಸ್ಥೈರ್ಯ ತುಂಬುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾದೆ.

ಈ ಶಿಕ್ಷಣ ಯಾರು ಬೇಕಾದರೂ ಪಡೆಯಬಹುದು. ಶಾಂತಿಯುತ ಮನಸ್ಸು, ಸಂಪೂರ್ಣ ಆರೋಗ್ಯ, ಆತ್ಮ ವಿಶ್ವಾಸ ನಾವು ಮಾಡುವ ಕಾರ್ಯಗಳಲ್ಲಿ ದಕ್ಷತೆ ಏಕಾಗ್ರತೆ, ಗ್ರಹಣ ಶಕ್ತಿ ಜ್ಞಾನ ಶಕ್ತಿ ವೃದ್ಧಿಸುವ ಹಾಗೂ ಜೀವನದ ಧ್ಯೇಯವನ್ನು ಸ್ಪಷ್ಟಪಡಿಸುವ ಕಾರ್ಯಕ್ರಮ ಇದಾಗಿದೆ. ಪರಿಣಾಮಕಾರಿ ಬದಲಾವಣೆಗೆ ಕಾರಣವಾಗುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಹಿಬೇಕು. ಧ್ಯಾನ ತರಬೇತುದಾರಾದ ವಿಶಾಲಾಕ್ಷಿ, ಉಮಾರಾಣಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ವಾನಮಣಿ ಗಣೇಶ್ ಕೇಶವರಾಜ್ ಸಂಗೀತ ಸುದೆ ಹರಿಸಲಿದ್ದಾರೆ ಎಂದರು.

ಪ್ರಮುಖರಾದ ಮೀನಾ ವೆಂಕಟೇಶ, ಪವಿತ್ರ, ರಂಗಮ್ಮ, ವಸಂತ ಕುಮಾರ ಇದ್ದರು.