ಹೊಸಪೇಟೆ: ಮೈಸೂರು ದಸರಾ ಆರಂಭವಾಗುವುದಕ್ಕೆ ಮೊದಲೇ ವಿಜಯನಗರ ಅರಸರ ಕಾಲದಲ್ಲಿ ದಸರಾ ಆಚರಣೆ ಆರಂಭವಾಯಿತು. ತಾಲೂಕಿನ ನಾಗೇನಹಳ್ಳಿ ಬಳಿಯ ಬಸವನದುರ್ಗದ ಐತಿಹಾಸಿಕ ಧರ್ಮದಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ ದೇವರ ಬನ್ನಿ ಉತ್ಸವದಲ್ಲಿ ಶಕ್ತಿ ದೇವತೆಗಳ ಸಮ್ಮಿಲನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಗಲಿದ್ದಾರೆ.
ಹಂಪಿಯಲ್ಲಿರುವ ಮಹಾನವಮಿ ದಿಬ್ಬವನ್ನು ನಿರ್ಮಿಸಿದ್ದು ಸಹ ಈ ದಸರಾ ಆಚರಣೆಗಾಗಿಯೇ. ಅಂದಿನಿAದ ನಡೆಯುತ್ತ ಬಂದಿರುವ ದಸರಾ ವಿಜಯನಗರ ಸಾಮ್ರಾಜ್ಯದ ಪತನದ ನಂತರ ತನ್ನ ಮಹತ್ವ ಕಳೆದುಕೊಂಡದೆ. ಅರಸರ ಕಾಲದಲ್ಲಿ ತಾಲೂಕಿನ ಧರ್ಮದಗುಡ್ಡದಲ್ಲಿ ವಿಜಯದಶಮಿಗೂ ಮುನ್ನದಿನ ನವಮಿಯಂದು ಏಳು ಕೇರಿಗಳ ಶಕ್ತಿ ದೇವತೆಗಳು ಚನ್ನಬಸವೇಶ್ವರ ಹಾಗೂ ನಿಜಲಿಂಗಮ್ಮನಿಗೆ ಬನ್ನಿ ಮುಡಿಸುತ್ತವೆ. ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗೊಳ್ಳುತ್ತ ಬಂದಿದೆ. ಸರ್ಕಾರದ ನೆರವಿಲ್ಲದೆ ಇಲ್ಲಿ ದಸರಾ ಆಚರಣೆ ನಡೆಯುತ್ತಿದ್ದರೆ, ಮೈಸೂರು ದಸರಾಕ್ಕೆ ಸರ್ಕಾರದ ನೆರವು ದೊರೆತು ವಿಜೃಂಭಣೆ ಪಡೆದುಕೊಳ್ಳುವಂತಾಗಿದೆ.
ಧರ್ಮದಗುಡ್ಡದಲ್ಲಿ ಪಾಂಡವರು ನೆಲೆಸಿದ್ದರು. ಶಿವನು ತಪಸ್ಸಿಗೆ ಹೋದಾಗ ನಂದಿ ಈ ಗುಡಕ್ಕೆ ಬಂದಿದ್ದನು. ಆದ್ದರಿಂದ ಇದನ್ನು ಧರ್ಮದಗುಡ್ಡ ಎಂದು ಖ್ಯಾತಿ ಪಡೆದಿದೆ. ಇಲ್ಲಿಜ ಜಾನಪದಗಳಲ್ಲಿ ಉಲ್ಲೇಖವಾಗಿದೆ ಎಂಬುದನ್ನು ಇತಿಹಾಸಕಾರರು ತಿಳಿಸುತ್ತಾರೆ. ನಾಗೇನಹಳ್ಳಿ ಗ್ರಾಮವನ್ನು ವಿಜಯನಗರ ಅರಸರ ಕಾಲದಲ್ಲಿ ನಾಗಲಾದೇವಿಪುರ ಎಂದು ಕರೆಯಲಾಗುತ್ತಿತ್ತು. ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ತಾಯಿ ನಾಗಲಾದೇವಿಯ ಹೆಸರಿನಲ್ಲಿ ಈ ಗ್ರಾಮ ನಿರ್ಮಾಣವಾಗಿದೆ. ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲೆ ಆಚರಣೆ ನಡೆಯುತ್ತಿರುವುದು ಈ ಭಾಗದ ಜನರ ಸುದೈವ ಎಂದೆ ಭಾವಿಸುತ್ತಾರೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೃಷ್ಣದೇವರಾಯ ಏಳು ಸಾವಿರ ಬೇಡರ ಪಡೆಗಳನ್ನು ಹೊಸಪೇಟೆ ಕೋಟೆಯ ಹಿಂಭಾಗದಲ್ಲಿ ಇರಿಸಿದ್ದ. ಆಗ ವಿಜಯನಗರ ಸಾಮ್ರಾಜ್ಯದ ವಿಸ್ತೀರ್ಣ 60 ಚದರ ಕಿ.ಮೀ.ನಷ್ಟಿತ್ತು. ಶತ್ರು ಸೈನ್ಯ ಹೊಸಪೇಟೆಯ ಬೇಡರ ಪಡೆಯನ್ನು ದಾಟಿಯೇ ಸಾಮ್ರಾಜ್ಯದೊಳಗೆ ಬರಬೇಕಿತ್ತು. 1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಗಳಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ವಿವರಣೆ ನೀಡುತ್ತಾರೆ.