ಜಿಲ್ಲೆ

ಶಾಂತಿಯುತವಾಗಿ ಬದುಕಲು ಅಹಿಂಸೆ ಮಾರ್ಗ ಪಾಲಿಸಿ

ಮಂಜುನಾಥ

ಹೊಸಪೇಟೆ: ಜಗತ್ತಿನಲ್ಲಿ ಸಮಸ್ತ ಪ್ರಾಣಿ, ಕ್ರಿಮಿ-ಕೀಟ, ಗಿಡ-ಮರ ಎಲ್ಲವಕ್ಕೂ ಜೀವವಿದೆ. ಅವುಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ ಎಂದು ವರ್ಧಮಾನ ಮಹಾವೀರರು ಪ್ರತಿಪಾದಿಸಿದ್ದಾರೆ ಎಂದು ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಪ್ಪ ನಮನಸಲ್ಲಿ ಮಾತನಾಡಿದರು.

ಪಂಪ ತನ್ನ ಎರಡು ಕೃತಿಗಳಲ್ಲಿ ಜಿನಧರ್ಮದ ಮಹಿಮೆಯನ್ನು ತಿಳಿಸಿದ್ದಾರೆ. 'ಜೀವದಯೆ ಜೈನಧರ್ಮಂ' ಎಂಬುದು ಜನ್ನನ ಮಾತಾಗಿದೆ. ಜೈನಧರ್ಮ 'ನೀನೂ ಬದುಕು, ಇತರರನ್ನೂ ಬದುಕಲು ಬಿಡು' ಎಂಬ ತತ್ವದ ತಳಪಾಯದಲ್ಲಿ ನಿಂತಿದೆ. ಅಹಿಂಸೆಯ ಶಾಂತಿಯ ಮಾರ್ಗ ಎಂದು 24 ನೇ ತೀರ್ಥಂಕರಾದ ಶ್ರೀಭಗವಾನ ಮಹಾವೀರರು ಬೋಧಿಸಿದ್ದಾರೆ. ಇಂದಿಗೂ ಅವರ ತತ್ವದ ಪಾಲನೆ ಅಗತ್ಯವಿದೆ. ಶಾಂತಿಯುತವಾಗಿ ಬದುಕಲು ಅಹಿಂಸೆ ಪಾಲನೆಯೇ ಸರಿಯಾದ ಮಾರ್ಗವಾಗಿದೆ. ಮಹಾವೀರರ ತತ್ವಾದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕಿದೆ. ಕೇವಲ ಜಯಂತಿ ಆಚರಣೆಯಿಂದ ಮಾತ್ರ ಅವರನ್ನು ಸ್ಮರಿಸದೇ ಅವರು ಬೋಧಿಸಿರುವ ಅಹಿಂಸಾ ಮಾರ್ಗವನ್ನು ಅನುಸರಿಸಿದಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗಲಿದೆ ಎಂದರು.