ಹೊಸಪೇಟೆ: ವಿಜಯನಗರ ಜಿಲ್ಲಾಧಿಕಾರಿ ಹೆಸರಿನ ಮತ್ತೆ ಹೊಸ ನಕಲಿ ಫೇಸ್‌ಬುಕ್ ಖಾತೆಯನ್ನೇ ತೆರೆದು ವಂಚನೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಎಚ್ಚರ ವಹಿಸಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ನಕಲಿ ಫೇಸ್ಬುಕ್ ಖಾತೆ ತೆರೆದ ಖದೀಮರು, ಜಿಲ್ಲಾಧಿಕಾರಿ ದಿವಾಕರ ಅವರ ಫೋಟೋವನ್ನು ಬಳಸಲಾಗಿದೆ. ನಕಲಿ ಪೇಸ್ ಬುಕ್ ಖಾತೆಯಿಂದ ಸಾರ್ವಜನಿಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತಾನು ಜಿಲ್ಲಾಧಿಕಾರಿಗಳ ಸ್ನೇಹಿತ, ಸಿಆರ್‌ಪಿಎಫ್ ಯೋಧನೆಂದು ಹೇಳಿಕೊಂಡು, ತನ್ನ ಬಳಿ ಹಳೇಯ ಫರ್ನೇಚರ್‌ಗಳಿವೆ. ತನಗೆ ಬೇರೆ ಕಡೆ ವರ್ಗಾವಣೆಯಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ನಂಬರ್ ಕೊಟ್ಟಿದ್ದು ಫರ್ನೇಚರ್ ರಿಯಾಯತಿ ಧರದಲ್ಲಿ ನೀಡುವುದಾಗಿ ವಂಚಿಸಿ, ಅವನ ಖಾತೆಗೆ ಹಣ ಪಾವತಿಸಲು ತಿಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಯಾವುದೇ ಊಹಾ ಪೋಹಗಳಿಗೆ ಯಾವುದೇ ಆಮಿಷಕ್ಕೆ ಒಳಗಾಗದೇ ಯಾವೊಬ್ಬರೂ ಸಹಾ ಇಂತಹ ಅಪರಿಚಿತ ವ್ಯಕ್ತಿಗಳಿಗೆ ಹಣ ಸಂದಾಯ ಮಾಡದಂತೆ, ಕರೆಗಳಿಗೆ ಸ್ಪಂದಿಸದAತೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಿದ್ದಾರೆ.