ಹೊಸಪೇಟೆ: ನಗರದ ಶರನಂ ಆಸ್ಪತ್ರೆಯಲ್ಲಿ 9 ವರ್ಷದ ಮಗು ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ಕುರಿತು ತನಿಖೆ ನಡೆಸಲು ಡಿಎಚ್‌ಒಗೆ ಸೂಚಿಸಲಾಗಿದೆ. ತನಿಖೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೆ ಈ ಹಿಂದೆಯೂ ಇದೇ ರೀತಿ ನಿರ್ಲಕ್ಷ್ಯದಿಂದ ಸಾವುಗಳು ಸಂಭವಿಸಿವೆ ಎಂಬ ದೂರುಗಳು ಬಂದಿವೆ. ಪ್ರಕರಣದ ಕುರಿತು ಗಮನಕ್ಕೆ ಬಂದ ಕೂಡಲೇ ಸಾವಿಗೆ ಕಾರಣ ಏನೆಂದು ತನಿಖೆ ನಡೆಸಲು ಡಿಎಚ್‌ಒಗೆ ಸೂಚಿಸಲಾಗಿದೆ. ಅವರು ವರದಿ ನೀಡಿದ ನಂತರ ನಿಯಮಾನುಸಾರ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.