oplus_0 
ಜಿಲ್ಲೆ

ಕಾಟಾಚಾರ ದಸರಾ ಕ್ರೀಡಾಕೂಟ

ಮಂಜುನಾಥ

ಹೊಸಪೇಟೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ದಸರಾ ಗ್ರಾಮೀಣ ಕ್ರೀಡಾಕೂಟದ ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ಯುವಕ ಹಾಗೂ ಯುವತಿ ಗುಂಪುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಬೇಕಾಗಿದ್ದ ಕ್ರೀಡಾಕೂಟ ಕೇವಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೂಟವಾಗಿ ಬದಲಾಗಿದೆ.

ಈ ಮೊದಲು ದಸರಾ ಗ್ರಾಮೀಣ ಕ್ರೀಡಾಕೂಟದ ಬಗ್ಗೆ ಗ್ರಾಮೀಣ ಭಾಗದ ಯುವಕ-ಯುವತಿ ಮಂಡಲಗಳಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿತ್ತು. ಇದಕ್ಕಾಗಿ ಶಾಲೆಗಳ ದೈಹಿಕ ಶಿಕ್ಷಕರ ನೆರವನ್ನು ಪಡುಕೊಳ್ಳಲಾಗಿತ್ತು. ಆದರೆ, ಈ ಬಾರಿ ಇದೆಲ್ಲದಕ್ಕೂ ತಿಲಾಂಜಲಿಯನ್ನು ನೀಡಿ ದಸರಾ ಕ್ರೀಡಾಕೂಟವನ್ನು ಕಾಟಾಚಾರಕ್ಕಾಗಿ ಮಾಡಿ ಮುಗಿಸಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ.

ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಆಯೋಜನೆ ಮಾಡಲಾದ ಈ ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರತಿಭೆಗಳ ಬದಲಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೂಟವಾಗಿ ಬದಲಾಗಿತ್ತು. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿದ್ದರೆ, ಯುವಕ ಗುಂಪ್ಪಿನ ಹೆಸರನ್ನು ಕಡ್ಡಾಯವಾಗಿ ನೀಡಬೇಕಾಗಿತ್ತು. ಆದರೆ ಈ ಬಾರಿ ಕಾಲೇಜು ಹೆಸರಿನಲ್ಲೇ ಭಾಗವಹಿರುವುದು ಅಚ್ಚರಿಗೆ ಕಾರಣವಾಗಿದೆ.

ಅವ್ಯವಸ್ಥೆಯ ಅಗರ

ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಏಕ ದಿನದ ಈ ದಸರಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಕ್ರೀಡಾಂಗಣದಲ್ಲಿ ಹೈಜಂಪ್ ಹಾಗೂ ಲಾಂಗ್‌ಜAಪ್‌ಗೆ ಸಮತಟ್ಟು ಮಾಡಿ ಸಿದ್ಧಪಡಿಸಿಲ್ಲ. ಖೋ-ಖೋ ಅಂಗಣದಲ್ಲಿ ಸಣ್ಣ ಕಲ್ಲು ತುಂಬಿತ್ತು. ಓಟದ ಟ್ರ‍್ಯಾಕ್ ಎಲ್ಲಿದೆ ಎಂದು ಹುಡುಕಿ ಓಡುವ ಸ್ಥಿತಿ ನಿರ್ಮಾಣವಾಗಿತ್ತು. ಕ್ರೀಡಾಪಟುಗಳಿಗೆ ಕುಡಿವ ನೀರಿನ ವ್ಯವಸ್ಥೆ ಕೂಡ ಮಾಡದೇ ಕೇವಲ ಆಯೋಜನಕರಿಗೆ ಮಾತ್ರ ನೀರಿನ ಬಾಟಲಿಗಳನ್ನು ಇಡಲಾಗಿತ್ತು. ಕ್ರೀಡಾಪಟುಗಳಿಗೆ ಊಟ ಮಾಡಿರುವ ಮಾಹಿತಿ ಕೂಡ ಇರಲಿಲ್ಲ. ನಾಮಕವಾಸ್ತೆ ಮಾಡಿದ ಅನ್ನ ಸಾಂಬಾರ್ ತಿನ್ನಲು ಯೋಗ್ಯವಿರಲಿಲ್ಲ. ಇಂತಹ ಅವ್ಯವಸ್ಥೆಯಲ್ಲೂ ಕ್ರೀಡಾಕೂಟ ಆಯೋಜನೆಯ ಅಗತ್ಯ ಇತ್ತಾ ಎಂಬ ಪ್ರಶ್ನೆ ಮೂಡುವಂತಿತ್ತು.

ಶಾಸಕರು ಭಾಗಿ

ಕ್ರೀಡಾಕೂಟದಲ್ಲಿ ರಾಜಕೀಯದವರನ್ನು ತೊಡಗಿಸಿಕೊಳ್ಳಬಾರದೆಂಬ ಸೂಚನೆಗಳಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಭಾಗವಹಿಸಿದರು.

ಯುವಕರಿಗೆ ಪ್ರೋತ್ಸಾಹಕ್ಕಾಗಿ ದಸರಾ ಕ್ರೀಡೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮೂಲಸೌಕರ್ಯದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಸಮಸ್ಯೆಯ ಕುರಿತು ಕ್ರಮಕೈಗೊಳ್ಳುವೆ. ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ

ಇಲಾಖೆಗೆ ಇದಕ್ಕೆ ಎಂದು ಅನುದಾನ ಬರಲ್ಲ. ಇದ್ದರಲ್ಲೇ ವ್ಯವಸ್ಥೆ ಮಾಡಬೇಕು. ಕ್ರೀಡಾಪಟುಗಳು ಎಂದು ಉಪವಾಸ ಇರಬಾರದು ಎಂದು ಅನ್ನ ಸಂಬಾರ್ ಮಾಡಿಸಲಾಗಿದೆ. ಕುಡಿವ ನೀರು, ಕ್ರೀಡೆಗೆ ಬೇಕಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಕೆ.ಗ್ರೇಸಿ, ಎಡಿ, ಯುವಕಜನ ಕ್ರೀಡಾ ಇಲಾಖೆ, ವಿಜಯನಗರ