ಹೊಸಪೇಟೆ: ನಗರ ಹೊರವಲಯದ ಟಿಬಿಡ್ಯಾಂ ಬಳಿಯ ಗುಡ್ಡಕ್ಕೆ ಕಿಡಿಗಡಿಗಳ ಕೃತ್ಯದಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು ಅರಣ್ಯ ಪ್ರದೇಶದಲ್ಲಿ ಮರ ಗಿಡ ಸುಟ್ಟುಹೋದ ಘಟನೆ ಬುಧವಾರ ಸಂಜೆ ನಡೆದಿದೆ.
ಗುಡ್ಡದ ಒಣ ಹುಲ್ಲಿಗೆ ಬುಧವಾರ ಮಧ್ಯಾಹ್ನ ಕಿಡಿಗಡಿಗಳಿಂದ ಬೆಂಕಿ ಹಚ್ಚಲಾಗಿದೆ ಎನ್ನಲಾಗುತ್ತಿದೆ. ಇದರ ಪರಿಣಾಮ ಗುಡ್ಡದಲ್ಲಿದ್ದ ಸಣ್ಣಪುಟ್ಟ ಮರ ಗಿಡಗಳು ಬೆಂಕಿಗೆ ಸುಟ್ಟು ಕರಕಲಾಗಿದೆ. ಬೆಂಕಿಯಿAದ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿ ಸ್ಥಳೀಯರು ಕೆಲ ಕಾಲ ಭಯಭೀತರಾಗಿ, ಆತಂಕದ ವಾತಾವರಣ ನಿರ್ಮಾಣವಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂಧಿಯಿAದ ಬೆಂಕಿ ನಂದಿಸುವ ಕಾರ್ಯ ನಡೆದಿದೆ