ಜಿಲ್ಲೆ

ದಲಿತರು ಸಿಎಂ ಎಂದರೆ ನಾನು ಕೂಡ ಒಬ್ಬ

ಮಂಜುನಾಥ

ಹೊಸಪೇಟೆ: ರಾಜ್ಯದಲ್ಲಿ ದಲಿತ ಸಿಎಂ ಕೂಗು ಇಲ್ಲ. ಪೇಪರ್, ಟಿವಿ ನವರಿಂದ ಕೂಗು ಕೇಳ್ತಾಯಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದಲಿತರು ಸಿಎಂ ಆಗಬೇಕು ಅನ್ನೋರಲ್ಲಿ ನಾನು ಕೂಡ ಒಬ್ಬ. ಆದರೆ, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲಾ, ಸಿದ್ದರಾಮಯ್ಯನವರು ಸಿಎಂ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸತೀಶ್ ಜಾರಕಿಹೊಳಿ ಭೇಟಿ ವಿಚಾರವನ್ನು ಹೆಚ್ಚು ಪುಷ್ಟಿ ಕೊಡೋದರಲ್ಲಿ ಅರ್ಥವಿಲ್ಲಾ. ಸತೀಶ್ ಜಾರ್ಕಿಹೊಳಿ ಅವರಿಗೆ ಹಲವು ವ್ಯವಹಾರವಿದೆ. ಜತೆಗೆ ಖರ್ಗೆಯವರ ಆರೋಗ್ಯ ವಿಚಾರಕ್ಕೂ ಹೋಗಿದ್ದಾರೆ. ಅದಕ್ಕೆ ಹೆಚ್ಚು ಚರ್ಚೆ ಮಾಡೋದು ಅಗತ್ಯವಿಲ್ಲಾ. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲಾ. ನಾನು ಇದೇ ಚುನಾವಣೆ ಕೊನೆ ಅಂತ ತೀರ್ಮಾನ ಮಾಡಿದ್ದೇನೆ ಎಂದರು.

ಜಾತಿ ಜನಗಣತಿ ವರದಿ ನಾವೂ ಕೂಡ ಇದುವರೆಗೆ ನೋಡಿಲ್ಲಾ. ಪರ ವಿರೋಧ ಇರುತ್ತದೆ. ಜಾತಿ ಜನಗಣತಿ ವಿಚಾರ ಸಚಿವ ಸಂಪುಟದಲ್ಲಿ ಬರಬೇಕು. ಒಪ್ಪಿಗೆಯಾಗಬೇಕಿದೆ. ಶಾಮನೂರು ಶಿವಶಂಕ್ರಪ್ಪನವರು ವಿರೋಧ ಮಾಡಿರೋ ವಿಚಾರ. ಇದು ಪ್ರಜಾಪ್ರಭುತ್ವ ಅಲ್ವಾ, ಅದು ಅವರ ವಿಚಾರ ಅಷ್ಟೇ ಎಂದರು.

ಮೈಸೂರು ಮುಡಾ ಹಗರಣದ ವಿಚಾರದಲ್ಲಿ ರಾಜಕಾರಣ ಮಾಡಲಾಗ್ತಿದೆ. ಯಾವುದೇ ರೀತಿಯಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲಾ. ಅವರು ಒಂದೇ ಒಂದು ಹೇಳಿರೋ ಸಾಕ್ಷಿಗಳು ತೋರಿಸಿ ನೋಡೊಣ. ಯಾವುದಾದರು ದಾಖಲಾತಿ ಇದೆನಾ? ತನಿಖೆಗೆ ಆದೇಶ ಮಾಡಿದ್ದಾರೆ, ಬಳ್ಳಾರಿ ಬುಡಾದಲ್ಲಿ ಅಧ್ಯಕ್ಷರಾಗಿದ್ದು ನಮ್ಮ ಪಕ್ಷದವರೇ, ಪತ್ರ ಬರೆದವರು ನಮ್ಮ ಶಾಸಕರೇ, ಅದು ನಮ್ಮ ಅಧ್ಯಕ್ಷರು ಬಗೆ ಹರಿಸುತ್ತಾರೆ. ನಾನು ಅದನ್ನ ಬಗೆಹರಿಸೋಕೆ ಆಗುತ್ತಾ? ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗೋಲ್ಲಾ ಎಂದರು.

ಜನಾರ್ದನ ರೆಡ್ಡಿ ಬಳ್ಳಾರಿ ಬಂದಿರೋದ್ರಿAದ ಯಾವುದೇ ಪ್ರಭಾವ ಬಿರೋಲ್ಲಾ. ಸಂಡೂರನ್ನ ಮೋದಿಜೀಯವರಿಗೆ ಗಿಫ್ಟ್ ಕೊಡ್ತೆವೆ ಅನ್ನೋ ಜನಾರ್ದನ ರೆಡ್ಡಿ ಹೇಳಿಕೆಗೆ, ಅವರಿಗೆ ಸಿಬಿಐ ಸೇರಿದಂತೆ ಹಲವು ಕೇಸ್ ಗಳ ಗಿಫ್ಟ್ ಇವೆ. ಅವೇ ಸಾಕು ಅವರಿಗೆ ಅದೇ ನೋಡಿಕೊಳ್ಳಲಿ. ಜನಾರ್ದನ ರೆಡ್ಡಿ ಬಂದರೆ ಯಾವುದೇ ಬದಲಾವಣೆಯಾಗಲ್ಲ ಎಂದರು.