ಹೊಸಪೇಟೆ: ರೈತರಿಗೆ ಪಟ್ಟ ನೀಡುವಂತೆ ಒತ್ತಾಯಿಸಿ ಎಐಕೆಎಸ್ ಸಂಯೋಜಿತ ಕರ್ನಾಟಕ ಪ್ರಾಂತ ರೈತ ಸಂಘದಿAದ ನಗರದಲ್ಲಿ ಗುರುವಾರ ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಜಂಬುನಾಥ ಹಳ್ಳಿ ಸರ್ವೆ ನಂಬರ್ ೧೧೪ರಲ್ಲಿ ಮತ್ತು ಸಂಕ್ಲಾಪುರ ಸರ್ವೆ ನಂಬರ್ ೧೮೫ರಲ್ಲಿ ನೂರಾರು ಕುಟುಂಬಗಳಿಗೆ ಈ ಜಮೀನು ಜೀವನಾಧಾರವಾಗಿದೆ. ಈ ಜಮೀನಿನಲ್ಲಿ ಉಳುಮೆ ಮಾಡಿರುವ ಸಾಕ್ಷಿಯಾಗಿ ಕಂದಾಯ ಇಲಾಖೆ ನೀಡಿರುವ ಕೈಬರಹ ಪಹಣಿ, ತೆರಿಗೆ ರಶೀದಿಗಳು ಸಹ ಇವೆ. ರೈತರು ಪಟ್ಟಾ ಪಡೆಯಲು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಸಾಗುವಳಿಗೆ ಯೋಗ್ಯವಲ್ಲದ ಭೂಮಿಗಳನ್ನು ಉಳುಮೆ ಮಾಡಿರುವ ಕುರುಹುಗಳು ಕಂಡುಬAದಲ್ಲಿ ೧೯೬೪ ರ ಭೂಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ವಂಚಿತ ದಲಿತರಿಗೆ, ಅತಿ ಹಿಂದುಳಿದ ವರ್ಗಗಳ ರೈತ ಕುಟುಂಬಗಳಿಗೆ ಕನಿಷ್ಠ ೫ ಎಕರೆವರೆಗೆ ಮಂಜೂರು ಮಾಡುವ ಅವಕಾಶವಿದೆ. ಆದರೆ, ೨೦೧೧ ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಬೇಡಿಕೆ ಹಿನ್ನೆಲೆ ಸಣ್ಣ ರೈತರ ಸಾಗುವಳಿ ಜಮೀನುಗಳನ್ನು ಬೆದರಿಕೆ ಹಾಕುವ ಮೂಲಕ ಬಲವಂತವಾಗಿ ಲೀಜ್ ಗೆ ನೀಡಲಾಗಿದೆ. ಅಂದು ರೈತರು ಪ್ರಶ್ನಿಸಿದಾಗ ಲೀಜ್ ಮುಗಿದನಂತರ ತಮ್ಮ ಭೂಮಿ ಉಳುಮೆ ಮಾಡಬಹುದು ಎಂದು ಹೇಳಿದರು. ಆದರೆ, ಈ ಹಿಂದಿನ ಶಾಸಕ ಬಡ ರೈತರಿಗೆ ಪಟ್ಟಾ ಕೊಡಬಹುದಿತ್ತು. ಆದರೆ ಬದಲಾಗಿ ಸಕ್ಕರೆ ಕಾರ್ಖಾನೆ ಮತ್ತು ಎಥೆನಾಲ್ ಹೆಸರಿನಲ್ಲಿ ಹಂಪಿಸುಗರ್ ಕಂಪನಿಗೆ ಎಕರೆಗೆ ೭ ಲಕ್ಷ ರೂ.ಗಳಂತೆ ಹಸ್ತಾಂತರ ಮಾಡಿರುವುದು ಇದು ನ್ಯಾಯವೇ? ಎಂಉ ಆಗ್ರಹಿಸಿದರು.
೨೦೦೮ ರಲ್ಲಿ ಭೂ ನ್ಯಾಯ ಮಂಡಳಿಯಿAದ ಪಟ್ಟಾ ಮಂಜೂರು ಮಾಡಲಾದ ರೈತರಿಗೆ ಪಟ್ಟಾ ನೀಡಬೇಕು. ಸಕ್ಕರೆ ಕಾರ್ಖಾನೆಯನ್ನು ಶಾಸಕರು ಕೊಟ್ಟ ಮಾತಿನಂತೆ ತ್ವರಿತವಾಗಿ ಆರಂಭಿಸಬೇಕು. ಇಂಗಳಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅನಾಧಿನಾ ಭೂಮಿಗೆ ಫಾರಂ ೫೭ ಹಾಕಿದ ಅರ್ಜಿಗಳಿಗೆ ಪಟ್ಟಾ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಎನ್..ಯಲ್ಲಲಿಂಗ, ಜಿ.ಕರಿಹನುಮಂತಪ್ಪ, ದುರುಗೇಶ್, ಗಾಳೇಪ್ಪ, ಮಂಜುನಾಥ, ಸೋಮಪ್ಪ, ಮಲ್ಲಯ್ಯ, ಚಿದನಂದಪ್ಪ, ಗೌರಿಶಂಕರ್ ಇತರರಿದ್ದರು.