ಹೊಸಪೇಟೆ ಭಟ್ರಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಬ್ಯಾಟಿಂಗ್ ಬಿಸಿದರು. ಎಸ್ಪಿ ಬಿ.ಎಲ್.ಶ್ರೀಹರಿಬಾಬು ಕೀಪಿಂಗ್ ಮಾಡಿದರು. 
ಜಿಲ್ಲೆ

ಕ್ರೀಡಾಕೂಟ ಸಾಮರಸ್ಯ‌ ಬೆಳೆಸುವಲ್ಲಿ ಸಹಕಾರಿ

ಮಂಜುನಾಥ

ಹೊಸಪೇಟೆ: ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ನಗರದ ಬಟ್ರಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಬೌಲಿಂಗ್ ಮಾಡುವ ಹಾಗೂ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಬ್ಯಾಟ್ ಬಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಯಾವುದೇ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ. ಒತ್ತಡದ ಕೆಲಸ ನಡುವೆ ಬಿಡುವು‌ ಮಾಡಿಕೊಂಡು ಸಂಭ್ರಮಿಸಲು ಕ್ರೀಡೆಗಳು ಸಹಕಾರಿ. ಕ್ರೀಡಾಕೂಟ ಎಲ್ಲರಲ್ಲಿ ಸಾಮರಸ್ಯ‌ ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಮಾಧ್ಯಮಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಮಾಜಮುಖಿಯಾಗಿ‌ ಕಾರ್ಯನಿರ್ವಹಿಸುವಂತಾಗಲಿ ಎಂದರು.

ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಕ್ರೀಡೆಗಳು ಮನುಷ್ಯನ ಮನಸ್ಸನ್ನು ಅರಳಿಸುತ್ತವೆ. ಅದರಲ್ಲೂ ಸೌಹಾರ್ದ ಪಂದ್ಯಾವಳಿಗಳು ತುಂಬಾ ಆನಂದ ನೀಡುತ್ತವೆ. ಪ್ರೀತಿ ವಿಶ್ವಾಸವನ್ನು ಮೂಡಿಸುತ್ತವೆ. ಕಷ್ಟಗಳನ್ನು ಮರೆಸುತ್ತವೆ. ಜತೆಗೆ ಕ್ರಿಯಾಶೀಲತೆ ಹೆಚ್ಚಿಸಲು ಕಾರಣವಾಗುತ್ತವೆ. ಪತ್ರಕರ್ತರ ಒತ್ತಡ ನಿವಾರಣೆಗೆ ಇಂತಹ ಕ್ರೀಡೆಗಳು ಅಗತ್ಯ ಎಂದರು.

ವಿಜಯನಗರ ಲವೆನ್ ಹಾಗೂ ಹಂಪಿ ಲವೆನ್ ಎಂದು 11 ಜನರ ಎರಡು ತಂಡಗಳು ರಚನೆ ಮಾಡಲಾಯಿತು. ಇದರಲ್ಲಿ ಟಾಸ್ ಗೆದ್ದ ಹಂಪಿ ಲವೆನ್ ಫಿಲಿಂಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಮಾಡಿದ ವಿಜಯನಗರ 15 ಒವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಹಂಪಿ ಲವೆನ್ 14 ಒವರ್ ಗೆ ಒಂದು ವಿಕೆಟ್ ನಷ್ಟಕ್ಕೆ104 ರನ್ ಪಡೆದು ಜಯಗಳಿಸಿದರು.

ಡಿವೈಎಸ್ಪಿ ಮಂಜುನಾಥ, ಸಂಘದ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಪತ್ರಕರ್ತರಾದ ವೆಂಕೊಬ್ ಪೂಜಾರ್, ಪ್ರಕಾಶ್, ವೆಂಕಟೇಶ್, ರೇಖ ಪ್ರಕಾಶ್, ಪೂರ್ಣಿಮಾ, ಇಂದಿರಾ ಕಲಾಲ್, ಭೀಮಾನಾಯ್ಕ, ಸುರೇಶ್ ಚೌಹಾಣ್, ಕೆ.ಬಿ.ಕವಾಸ್, ಶಕ್ಷಾವಲಿ ಇತರರಿದ್ದರು.