ಜಿಲ್ಲೆ

ರಾಷ್ಟ್ರ ಮಟ್ಟದ ಕ್ರಿಕೆಟ್ ಗೆ ಪ್ರಕಾಶ ಆಯ್ಕೆ

ಹೊಸಪೇಟೆ: ಈ ಸಾಲಿನ ಅಖಿಲ ಭಾರತೀಯ ನಾಗರೀಕ ಸೇವಾ ಕ್ರಿಕೆಟ್ ಪಂದ್ಯಾವಳಿಯ 18 ಸದಸ್ಯ ತಂಡದಲ್ಲಿ ವಿಜಯನಗರ ಜಿಲ್ಲೆಯಿಂದ ಪ್ರಕಾಶ ಕಡಬಗೆರೆ ಆಯ್ಕಗಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕಾಹೀದಾ ಎನ್.ಗಟ್ಟಿನಮಹಲ ಆದೇಶಿದ್ದಾರೆ.
ಮಾ.17ರಿಂದ 24ರಂದು ದೆಹಲಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ  ರಾಜ್ಯ ಸರ್ಕಾರಿ ನೌಕರರ ಕ್ರಿಕೆಟ್ ತಂಡಕ್ಕೆ ಕೋಚ್, ವ್ಯವಸ್ಥಾಪಕ ಸೇರಿದಂತೆ 18 ಕ್ರೀಡಾಪಟುಗಳಲ್ಲಿ ಪ್ರಕಾಶ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ತಂಡದ ನಾಯಕ ಸೇರಿ ಕಲ್ಯಾಣ ಕರ್ನಾಟಕದಿಂದ 7 ಜನ ಆಯ್ಕೆ ಯಾಗಿದ್ದಾರೆ. ಉಳಿದವರು ಬೆಂಗಳೂರಿನಿಂದ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆಯ ಕಮಲಾಪುರದ ಸಿಆರ್ ಪಿ ಹುದ್ದೆಯಲ್ಲಿರುವ ಪ್ರಕಾಶ ಕಡಬಗೆರೆ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಪ್ರಯಾಣ ಹಾಗೂ ದಿನದ ಭತ್ತೆಯೊಂದಿಗೆ ಆದೇಶ ನೀಡಲಾಗಿದೆ.