ಜಿಲ್ಲೆ

ಕ್ರೇನ್‌ ವಾಹನ ಹರಿದು ಮಹಿಳೆ ಸಾವು

ಮಂಜುನಾಥ

ಹೊಸಪೇಟೆ: ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ನೀರು ತರುತ್ತಿದ್ದ ಮಹಿಳೆ ಮೇಲೆ ಕ್ರೇನ್‌ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ಅನಂತಶಯನಗುಡಿ ನಿವಾಸಿ ಲಕ್ಷ್ಮಿ (34) ಮೃತಪಟ್ಟ ಮಹಿಳೆ. ಈ ಮಹಿಳೆ ನಾಗರಾಜ ಎಂಬವರ ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ನೀರು ತರಲು ಹೋಗಿದ್ದಾಗ ಅನಂತಶಯನಗುಡಿ ಕಡೆಯಿಂದ ಬಂದ ಕ್ರೇನ್‌ ಹರಿದಿದೆ. ಈ ಕುರಿತು ನಗರದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.