ಜಿಲ್ಲೆ

ಕೋಮು ಗಲಭೆಗೆ ಅವಕಾಶ ಆಗದಿರಲಿ

ಮಂಜುನಾಥ

ಹೊಸಪೇಟೆ: ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಭಾರತ ಕಮ್ಮೂನಿಷ್ಟ ಪಕ್ಷ ಮಾರ್ಕ್ಸ್ ವಾದಿ ಪಕ್ಷದಿಂದ ನಗರದ ಡಾ.ಪುನೀತ್‌ರಾಜಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಪಿಐಎಂ ಪಕ್ಷದ ಕಾರ್ಯದರ್ಶಿ ಎನ್.ಯಲ್ಲಾಲಿಂಗ ಮಾತನಾಡಿ, ಉಗ್ರವಾದಿಗಳ ನಿರ್ನಾಮಕ್ಕೆ ಸಿಪಿಐಎಂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕೇಂದ್ರ ಸರ್ಕಾರ ಸಂಕುಚಿತ ಮನೋಭಾವ ಹೊಂದಿರ ಬಾರದು ಎಂದಿದೆ. ಕಾಶ್ಮೀರದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಸಹ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಪ್ರವಾಸಿಗರ ಕುಟುಂಬಸ್ಥರು ಹೇಳಿದಂತೆ ಅಲ್ಲಿನ ಮುಸ್ಲಿಂ ಜನ ಸಮುದಾಯ ರಕ್ಷಣೆಗೆ ನಿಂತಿದೆ. ಆದ್ದರಿಂದ ಈ ವಿಷಯಕ್ಕೆ ಸಂಬAಧಿಸಿದAತೆ ಕೋಮುಗಲಭೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಮುಖAಡ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ಪತ್ನಿ ಮತ್ತು ಮಕ್ಕಳ ಎದುರುಗಡೆ ಗುಂಡಿಕ್ಕಿದ ಉಗ್ರವಾದಿಗಳನ್ನು ಎಂದೆAದಿಗು ಕ್ಷಮಿಸಲು ಸಾಧ್ಯವಿಲ್ಲ. ಆದರೆ, ಅವರು ದೇಶದಲ್ಲಿ ನುಸುಳಿರುವ ಮಾಹಿತಿ ಕೇಂದ್ರ ಸರ್ಕಾರಕ್ಕೆ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲಿನ ರಕ್ಷಣಾ ಪಡೆ ಅಧಿಕಾರಿಗಳ ಏಕೆ ನಿಯೋಜನೆ ಮಾಡಿರಲಿಲ್ಲ ಎಂದರು.

ಪ್ರಮುಖರಾದ ಎ.ಕರುಣಾನಿಧಿ, ಜಂಬಯ್ಯ ನಾಯಕ, ಎಂಗೋಪಾಲ, ಬಿಸಾಟಿ ಮಹೇಶ್, ಯಲ್ಲಮ್ಮ, ಸಿದ್ದಲಿಂಗಪ್ಪ, ಉಮಾಮಹೇಶ್ವರ, ಈಡಿಗರ ಮಂಜುನಾಥ ವಿ.ಸ್ವಾಮಿ ಇತರಿದ್ದರು.