ಹೊಸಪೇಟೆ: ಬಡವರ, ದಲಿತರ, ಮಹಿಳೆಯರ ರಕ್ಷಣೆ ಮಾಡುವಲ್ಲಿ ಮತ್ತು ಯುವಜನರಿಗೆ ಉದ್ಯೋಗ ಕೋಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಹೇಳಿದರು.
ಸೌಹಾರ್ದ ಭಾರತದ ನಿರ್ಮಾಣಕ್ಕಾಗಿ ಜನತೆಯ ಚಳುವಳಿ ವಿಸ್ತಾರಕ್ಕಾಗಿ ಸಿಪಿಐ(ಎಂ) ಪಕ್ಷದಿಂದ ನಗರದ ಅಂಬೇಡ್ಕರ್ ವೃತ್ತದ ಬಳಿ ಮಂಗಳವಾರ 13ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಸಂಪತ್ರು ಬಳಿಸಿಕೊಂಡ ಉದ್ಯೋಗದ ಅವಕಾಶ ಸೃಷ್ಠಿಸಬೇಕಿದೆ. ಕೋಟಿ ಕೋಟಿ ರೂ. ಬಜೆಟ್ ಅನುದಾನ ಯಾರ ಮನೆ ಸೇರುತ್ತಿವೆ ಎಂಬುದು ಅರಿಯಬೇಕು. 125 ರಾಷ್ಟ್ರಗಳು ಹಸಿವಿನಿಂದ ಬಳತ್ತಿದೆ. ಬಡತನದಲ್ಲಿ 115ನೇ ಸ್ಥಾನದಲ್ಲಿ ಭಾರತ ಕುಸಿದಿದೆ. 80 ಕೋಟಿ ಜನ ಪಡಿತರ ಚೀಟಿ ಇಲ್ಲದೇ ಬದಕಲಾರರು. ಇನ್ನೂ 20 ಕೋಟಿ ಜನ ಪಡಿತರ ಚೀಟಿ ಇಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ. ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ 10 ರಿಂದ 12 ಜನ ಒಂದು ನಿಮಿಷ್ಯಕ್ಕೆ ಸಾಯುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿದೆ. ಬಡವರ, ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಸಿಪಿಐಎಂ ಪಕ್ಷದಿಂದ ಹಲವು ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದೆ. ಆದರೆ, ಸರ್ಕಾರಗಳು ಸಂಪೂರ್ಣ ಕಿವುಡವಾಗಿವೆ ಎಂದು ಆಗ್ರಹಿಸಿದರು.
1.25 ಲಕ್ಷ ರೂ.ಗಳಂತೆ 3365 ಎಕರೆ ಜಮೀನು ಜಿಂದಾಲ್‌ಗೆ ನೀಡಿದೆ. ಬೆಂಗಳೂರಿAದ ಮೈಸೂರಿನ ನೈಸ್ ರಸ್ತೆಯಲ್ಲಿ 7 ಸಾವಿರ ಜಮೀನು ಬಂಡವಾಳ ಶಾಹಿಗಳಿಗೆ ನೀಡಿದ್ದಾರೆ. ಜಾತಿ ಧರ್ಮ ಹೆಸರಿನಲ್ಲಿ ರಾಜಕೀಯವ ಮಾಡುವ ಪಕ್ಷಗಳಿಗೆ ಪಾಠ ಕಲಿಸಬೇಕಿದೆ. ದೇಶದ ಅಭಿವೃದ್ಧಿ, ಪ್ರಜಾಪ್ರಭುತ್ವ ಉಳಿಯ ಬೇಕು ಸಿಪಿಎಂ ಪಕ್ಷಕ್ಕೆ ಬೆಂಬಲಿಸಿ ಎಂದರು.