ಹೊಸಪೇಟೆ: ಜ್ಞಾನವನ್ನು ಗಳಿಸುವುದರ ಜತೆಗೆ ಪಡೆದುಕೊಂಡ ಜ್ಞಾನವನ್ನು ಎಲ್ಲರ ಮುಂದೆ ಹೇಗೆ ಮಂಡಿಸಬೇಕು ಎಂಬುದು ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಓದು ನಿರಂತರವಾಗಿಬೇಕು ಮತ್ತು ಹೆಚ್ಚು ಶ್ರಮವಹಿಸಬೇಕು ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ವಿವಿಯ ಪಂಪ ಸಭಾಂಗಣದಲ್ಲಿ 21 ದಿನಗಳ ಯುಜಿಸಿ ನೆಟ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಚಿಕ್ಕವಯಸ್ಸಿನಲ್ಲೇ ಉನ್ನತ ಸ್ಥಾನಪಡೆಯುವ ಬಯಕೆ ನಿಮಗಿರಲಿ. ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರಗಳು ಶೈಕ್ಷಣಿಕ ವಾತವರಣವನ್ನು ರೂಪಿಸುತ್ತವೆ. ಇದರ ಸದುಪಯೋಗಪಡಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೆ ಜೀವನದಲ್ಲಿ ಸೋತೆವೆಂದು ಅಲ್ಲ, ಅದರ ಆಚೆಗೆ ನಿಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಿ ಎಂದರು.
ಶಿರಹಟ್ಟಿಯ ಸಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಚ್.ಸಿ.ಅನುಷಾ ಮಾತನಾಡಿ, ವಿವಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬAಧಿಸಿದAತೆ ತರಬೇತಿಗಳನ್ನು ನಡೆಸುವುದು ತುಂಬಾ ವಿರಳ. ಆದರೆ ಕನ್ನಡ ವಿವಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತುಕೊಟ್ಟು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಮಹತ್ವದ ಕಾರ್ಯವಾಗಿದೆ. ದುಡಿಮೆಯಿಲ್ಲದ ಯಾವುದೇ ಪದವಿಗಳಿಗೆ ಬೆಲೆಯಿಲ್ಲ. ಈ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಪದವಿಗಳ ಜೊತೆಗೆ ಇಂತಹ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡುವುದರಿAದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲಲ್ಲು ಸಾಧ್ಯ ಎಂದರು.
ಪ್ರಾಧ್ಯಾಪಕರಾದ ಡಾ.ಎಚ್.ಸಿ.ಅನುಷಾ, ಡಾ.ರ‍್ರಿಸ್ವಾಮಿ, ಡಾ.ವೆಂಕಟಗಿರಿ ದಳವಾಯಿ ಇದ್ದರು.