ಜಿಲ್ಲೆ

ಪತ್ರಿಕೆಯಲ್ಲಿ ಹೇಳಿದನ್ನೇ ಸಿಎಂಗೆ ಹೇಳುವೆ

ಮಂಜುನಾಥ

ಹೊಸಪೇಟೆ: ಕನ್ನಡ ವಿವಿ ಆವರಣದಲ್ಲಿ ಮಂಗಳವಾರ ಆಗಮಿಸಿದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ವಸತಿ ಮನೆ ಹಂಚಿಕೆ ಭ್ರಷ್ಟಾಚಾರದ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಸರ್ಕಾರ ನಮ್ಮ ನಡುವಿನದು ಗಂಡ ಹೆಂಡತಿ ಜಗಳ ಇದ್ದ ಹಾಗೇ. ವಸತಿ ಇಲಾಖೆ ಮನೆ ಹಂಚಿಕೆಯಲ್ಲಿ ಭ್ರಷ್ಟಚಾರ ವಿಚಾರವಾಗಿ ಸಿಎಂಗೆ ಭೇಟಿ ಆಗುವೆ. ನನ್ನ ಬೇಡಿಕೆಗಳು ಏನಿಲ್ಲ. ಪತ್ರಿಕೆಯಲ್ಲಿ ಹೇಳಿರುವುದನ್ನೇ ಮುಂದೆ ಹೇಳಿರುವುದನ್ನೇ ಸಿಎಂ ಮುಂದೆ ಹೇಳುತ್ತೇನೆ ಎಂದು ಸೈಲೆಂಟ್ ಆಗಿ ಜಾರಿ ಕೊಂಡರು.

ಇದೇ ವೇಳೆ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಫೋನ್ ಕರೆಗಳ ಮೂಲಕ ವ್ಯಕ್ತಿಯೋಬ್ಬರು ವಸತಿ ನಿವೇಶನ ಹಂಚಿಕೆ ವಿಚಾರವಾಗಿ ಅಕ್ರಮದ ದೂರು ನೀಡಿದರು. ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಫೋನ್ ಮಾಡಿದ್ದ ವ್ಯಕ್ತಿ, ಅಂಬೇಡ್ಕರ್ ವಸತಿ ನಿಗಮದ ಮನೆಗೆ 20 ಸಾವಿರ ರೂ., ಬಸವ ವಸತಿ ಯೋಜನೆಯ ಮನೆಗೆ 15 ಸಾವಿರ ರೂ. ಕೇಳುತ್ತಿದ್ದಾರೆ ಎಂದು ಸಮಸ್ಯೆ ಹೇಳಿಕೊಂಡರು. ಸರಿ ಆ ಮೇಲೆ ಮಾತನಾಡುವೆ ಎಂದು ಪೋನ್ ಕರೆ ಕಟ್ ಮಾಡಿದರು. ಬಹಳಷ್ಟು ಜನ ಫೋನ್ ಮಾಡುತ್ತಿದ್ದಾರೆ. ನನಗೆ ಫೋನ್ ಸಾಕಾಗಿದೆ ಎಂದರು.