ಜಿಲ್ಲೆ

ಶೌಚಾಗೃಹ ಬಳಕೆಗೆ ಅರಿವು ಮೂಡಿಸಿ

ಮಂಜುನಾಥ

ಹೊಸಪೇಟೆ: ಶೌಚಾಲಯ ಬಳಕೆಗೆ ಕುರಿತು ಐಇಸಿ ಚಟುವಟಿಕೆಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಶಾ ಹೇಳಿದರು.

ಸ್ವಚ್ಛತಾ ಹೀ ಸೇವಾ ಪಾಕ್ಷೀಕ-2024 ನಿಮಿತ್ತ ಜಿಲ್ಲಾ ಪಂಚಾಯತ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ವಚ್ಚ ಭಾರತ್( ಗ್ರಾ) ಸಹಯೋಗದಲ್ಲಿ ಜಿಲ್ಲಾ ಪಂಚಾಯಿಸಿ ಸಭಾಂಗಣದಲ್ಲಿ ಸಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅ.02 ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷೀಕ ಅಭಿಯಾನ ಹಾಗೂ ವಿವಿಧ ಪ್ರಮುಖ ಚಟುವಟಿಕೆಗಳನ್ನು ಆಯೋಜಿಸಬೇಕು. ಪ್ರತಿನಿಧಿಗಳು, ನರೇಗಾ, ಎನ್.ಆರ್.ಎಲ್.ಎಂ, ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಆರೋಗ್ಯ, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆ 14 ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಾರ್ವಜನಿಕ ಕಟ್ಟಡ ಆಸ್ವತ್ರೆ ಮುಂಭಾಗ ಮತ್ತು ಹಿಂಭಾಗ, ತೆರೆದ ಕಲ್ಯಾಣಿ, ಮತ್ತು ವೈಯಕ್ತಿಕ ಶೌಚಲಯಗಳಲ್ಲಿ ಶನಿವಾರದಂದು ಸ್ವಚ್ಛತೆ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರು ಶೌಚಾಲಯ ಬಳಸುವಂತೆ ಐಇಸಿ ಚಟುವಟಿಕೆಗಳನ್ನು ಆಯೋಜಿಸಬೇಕು. ಪ್ರತಿ ದಿನ ಗ್ರಾಮ ಪಂಚಾಯಿತಿಯಿAದ ಬರುವ ಸ್ವಚ್ಛತಾ ವಾಹಿನಿಗೆ ಹಸಿ ಕಸ ಒಣ ಕಸ ನೀಡಲು ಜಾಗೃತಿ ಮಾಡಿಸಬೇಕು. ಈ ಅಭಿಯಾನದಲ್ಲಿ ವೈಯಕ್ತಿಕ ಶೌಚಾಲಯ ಇಲ್ಲದ ಕುಟುಂಬಗಳಿಗೆ ಅರ್ಜಿ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.