ಹೊಸಪೇಟೆ: ಪತಂಜಲಿ ಯೋಗ ಪೀಠದ ಸಂಸ್ಥಾಪನಾ ದಿನದ ನಿಮಿತ್ತ ಜನನಿ ವಿವಿಧೋದ್ದೇಶ ಸಹಕಾರಿ ಸಂಘ, ವೈದ್ಯಕೀಯ ಸಂಘಗಳ ಸಹಯೋಗದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ಭಾನುವಾರ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕಾ ಅಭಿಯಾನ ನಡೆಯಿತು.
ಕಿರ್ಲೋಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ಸಹಿತ ಹಲವು ಬಗೆಯ ಕ್ಯಾನ್ಸರ್‌ಗಳಿಂದ ಜನ ಸಾಯುತ್ತಿದ್ದು, ಅದನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ. ಇದಕ್ಕೆ ಲಸಿಕೆ ಇದೀಗ ಲಭ್ಯವಾಗಿದ್ದು, ಅದನ್ನು ಕಡ್ಡಾಯವಾಗಿ ಬಳಸುವ ನಿಟ್ಟಿನಲ್ಲಿ ಲಸಿಕೆ ಪಟ್ಟಿಯಲ್ಲಿ ಸೇರಿಸುವ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.
ಕೆಎಫ್‌ಐಎಲ್ ಮಹಿಳಾ ಕ್ಲಬ್ ಅಧ್ಯಕ್ಷೆ ಕಮಲಾ ಗುಮಾಸ್ತೆ ಮಾತನಾಡಿ, 9 ರಿಂದ 15 ವರ್ಷದೊಳಗಿನವರಿಗೆ ಎರಡು ಡೋಸ್, 35 ವರ್ಷದೊಳಗಿನವರು ಮೂರು ಡೋಸ್ ಲಸಿಕೆ ಹಾಸಿಕೊಳ್ಳಬೇಕು, ಪುರುಷರು ಸಹ ಹಾಕಿಸಿಕೊಳ್ಳಬಹುದು. ಇದರಿಂದ ಅಡ್ಡ ಪರಿಣಾಮ ಏನೂ ಇಲ್ಲ ಎಂದರು.
ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ಭೂಪಾಳ್ ಮಾತನಾಡಿ, ಕ್ಯಾನ್ಸರ್ ಕುರಿತ ತಿಳಿವಳಿಕೆ ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಫ್ರೀಡಂ ಪಾರ್ಕ್ನಲ್ಲಿ ಯೋಗ ಮತ್ತು ಆರೋಗ್ಯ ಕಾಳಜಿಯ ಸಂಗಮವಾಗಿದೆ ಎಂದರು.
ಪತAಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಜನನಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಸ್ಥ ಅನಂತ ಜೋಷಿ, ಪ್ರಮುಖರಾದ ಶ್ರೀರಾಮ, ಶೈಲಜಾ ಕಳಕಪ್ಪ, ಡಾ.ಸುಮಂಗಲಾದೇವಿ, ಡಾ.ಶಶಿಕಲಾ ಗುಗ್ರಿ, ಡಾ.ಹೇಮಲತಾ, ಡಾ.ತನುಜಾ, ಡಾ.ಅಂಜನಾ ರಾಜೀವ್ ಇತರರಿದ್ದರು.