ಜಿಲ್ಲೆ

ಕೊಪ್ಪಳ ಮೂಲದ ವ್ಯಕ್ತಿ ನೀರು ಪಾಲು

ಮಂಜುನಾಥ

ಹೊಸಪೇಟೆ: ತಾಲೂಕಿನ ಕಮಲಾಪುರದ ಎಲ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿ ಕೊಪ್ಪಳದ ಹುಲಿಗಿಯ ಹನುಮಂತ (38) ಎಂಬುವರು ನೀರು ಪಾಲಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಪಟ್ಟಣದ ಕೆರೆತಾಂಡಾಕ್ಕೆ ಮಾವನ ಮನೆಗೆ ಆಗಮಿಸಿದ್ದಾರೆ. ಹೊಲಕ್ಕೆ ಹೋಗಿ ನಂತರ ಕಾಲುವೆಗೆ ಗಂಡ ಹೆಂಡತಿ ಬಟ್ಟೆ ಹೊಗೆಯಲು ಹೋಗಿದ್ದಾರೆ. ಈ ವೇಳೆ ಈಜಲು ಹೋದಾಗ ನೀರಿನ ಸುಳಿಯಲ್ಲಿ ಸಿಲುಕಿಕೊಂಡು ನೀರು ಪಾಲಾಗಿದ್ದಾರೆ. ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನ ನಡೆಸಿದರು ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದರು.

ಘಟನೆ ಒಂದು ಗಂಟೆ ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದರು ಪ್ರಯೋಜನವಾಗಿಲ್ಲ. ದಾಖಲೆಗೆ ಕಾರ್ಯಚರಣೆ ನಡೆಸಿದ ಹಾಗೆ ಕೇವಲ ಪೋಟೋಗಳನ್ನು ತಗೆದುಕೊಂಡರು ಹೊರತು ವ್ಯಕ್ತಿಯ ರಕ್ಷಣೆ ಕಾರ್ಯ ನಡೆಸಲಿಲ್ಲ ಎಂದು ಸ್ಥಳೀಯರ ಆರೋಪಿಸಿದರು.