ಎಂ.ಎಸ್.ದಿವಾಕರ 
ಜಿಲ್ಲೆ

ಗ್ರಾ.ಪಂ. ಉಪ ಚುನಾವಣೆ ವೇಳಾಪಟ್ಟಿ ಪ್ರಕಟ

ಮಂಜುನಾಥ

ಹೊಸಪೇಟೆ: ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾ.ಪಂ.ಗಳಲ್ಲಿ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಗೆ ಅಧಿಸೂಚನೆ ಪ್ರಕಟಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಕೊಟ್ಟೂರು ತಾಲೂಕಿನ ನಾಗರಕಟ್ಟೆ, ರಾಂಪುರ ಮತ್ತು ಉಜ್ಜಿನಿ, ಹೂವಿನ ಹಡಗಲಿ ತಾಲೂಕಿನ ಮಾಗಳ, ಸೋವೆನಹಳ್ಳಿ ಮತ್ತು ಮಕ್ಕರಬ್ಬಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಿಗಿದೇರಿ, ಮೊರಗೇರಿ ಮತ್ತು ಗದ್ದಿಕೇರಿ, ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿ, ಬಣವಿಕಲ್ಲು, ಹರಪನಹಳ್ಳಿ ತಾಲೂಕಿನ ಯಡೀಹಳ್ಳಿ, ಕುಂಚೂರು ಮತ್ತು ಕೂಲಹಳಿ, ತಾಲೂಕಿನ ಡಣಾಯಕನಕೆರೆ, ಸೀತಾರಾಮತಾಂಡ, ಹಂಪಿ ಗ್ರಾಪಂಗಳಿಗೆ ತಲಾ ಒಂದು ಸದಸ್ಯ ಸ್ಥಾನ ಹಾಗೂ ಪಾಪಿನಾಯಕನಹಳ್ಳಿ ಗ್ರಾಪಂನಲ್ಲಿ 2 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ನ.12 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.13 ರಂದು ನಾಮಪತ್ರಗಳ ಪರಿಶೀಲನೆ ಮತ್ತು ನ.15 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ನ.23 ರಂದು ಅವಶ್ಯವಿದ್ದರೆ ಮತದಾನ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ನ.25 ನಡೆಸಬೇಕು. ಮತ ಎಣಿಕೆ ಪ್ರಕ್ರಿಯೆ ನ.26 ರಂದು ನಯನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.