Oplus_131072 
ಜಿಲ್ಲೆ

ಕೇಂದ್ರ ರಾಜ್ಯ ಸರ್ಕಾರಗಳು ಆಡಳಿತದಲ್ಲಿ ವಿಫಲ

ಹೊಸಪೇಟೆ: ಅಂಬೇಡ್ಕರ್ ಕರೆಕೊಟ್ಟಂತೆ ಬಹುಜನರು ಗುಲಾಮಗಿರಿಯನ್ನು ತೊರೆದು ಸ್ವಾಭಿಮಾನಿಗಳಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಗುಲಾಮಗಿರಿ ಮಾಡುತ್ತಿರುವವರನ್ನು ನಮ್ಮ ಪಕ್ಷಕ್ಕೆ ಕರೆತರುವ ಮೂಲಕ ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತರ, ದಲಿತರನ್ನು ಒಗ್ಗೂಡಿಸಿ ಹೊಸ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದರು.

ದಲಿತರ ಪರ ಎಂದು ಕಾಂಗ್ರೆಸ್, ಹಿಂದುಗಳ ಪರ ಎನ್ನುವ ಬಿಜೆಪಿ ಪಕ್ಷಗಳು ಯಾರ ಪರವು ಇಲ್ಲ. ಕೇಂದ್ರದ ಸರ್ಕಾರ ಆಡಳಿತ ವೈಫಲ್ಯದಿಂದ ದೇಶದ ಪ್ರತಿಯೊಬ್ಬ ಭಾರತೀಯನ ಮೇಲೆ 4.80 ಲಕ್ಷ ರೂ. ಸಾಲಗಳಿವೆ. ದೇಶದ ಆರ್ಥಿಕ ವ್ಯವಸ್ಥೆ ಏರಿಕೆ ಮಾಡಿದರೆ ಸಾಲದು, ಜನಸಾಮಾನ್ಯರು ಆರ್ಥಿಕ ಅಭಿವೃದ್ಧಿ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಕಾಣಬಹುದು. ದೇಶದಲ್ಲಿ 64 ಕೋಟಿ ಜನರಿಗೆ ಬಡತನ ಆವರಿಸಿದೆ. ಯುವಕರ ಭವಿಷ್ಯ ಗುಲಮರನ್ನಾಗಿ ಮಾಡಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ಆಗ್ರಹಿಸಿದ್ದಾರೆ. ಹಲವು ನಿಗಮಗಳಿಗೆ ಅನುದಾನ ಇಲ್ಲದೇ ಬಳಲುತ್ತೀವೆ. ಪಿಎಂ ನರೇಂದ್ರ ಮೊದಿಯವರು ಹೇಳುವಷ್ಟು ಸುಳ್ಳು ಸಿಎಂ ಸಿದ್ದರಾಮಯ್ಯ ಕೂಡ ಹೇಳುತ್ತಾರೆ. ಹಣ ಹೆಂಡ್ಡ ಹಂಚಿ ಅಧಿಕಾರಕ್ಕೆ ಬರುವ ಸರ್ಕಾರಗಳಿಂದ ಅಭಿವೃದ್ಧಿ ಅಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ಬಿಎಸ್‌ಪಿಗೆ ಬೆಂಬಲ ನೀಡಬೇಕಿದೆ ಎಂದರು.

ಪ್ರಮುಖರಾದ ಗಂಗಾಧರ್, ಕಲ್ಲಪ್ಪ ತುರುವಿ, ಮಾದೇವ್, ರಮೇಶ್, ಲಕ್ಷ್ಮಣ ಇದ್ದರು.