ಹೊಸಪೇಟೆಯ ಶಂಕರ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಸಂಭಾಗಣದಲ್ಲಿ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನದಲ್ಲಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಪ್ರಾಚಾರ್ಯ ಕೆ.ಶಿವಪ್ಪ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ನಿರ್ದೇಶಕ ಡಾ.ಮಾಧವ ಪೆರಾಜೆ ಇತರರಿದ್ದರು. 
ಜಿಲ್ಲೆ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ನರೇಶ್ ಕುಮಾರ್

ಹೊಸಪೇಟೆ: ದುಬಾರಿ ಬೆಲೆಯ ಮೊಬೈಲ್‌ಗಳನ್ನು ಹಿಡಿದು ಕಾಲಹರಣ ಮಾಡುವ ಬದಲು ಕಡಿಮೆ ಬೆಲೆಯಲ್ಲಿ ಜ್ಞಾನ ನೀಡುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಕನ್ನಡ ವಿವಿಯ ಪ್ರಸಾರಾಂಗದಿಂದ ಶಂಕರ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಸಂಭಾಗಣದಲ್ಲಿ ಬುಧವಾರ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮದುವೆ, ಗೃಹ ಪ್ರವೇಶ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿಯೂ, ಪಾತ್ರೆ ಮೊದಲಾದ ಉಡುಗೊರೆಗಳನ್ನು ಕೊಡುವ ಬದಲು ಶಾಶ್ವತವಾಗಿ ಜ್ಞಾನದ ರೂಪದಲ್ಲಿ ಮನೆಯಲ್ಲಿರಬಹುದಾದ ಪುಸ್ತಕಗಳನ್ನೇ ಕೊಡುಗೆಯಾಗಿ ನೀಡಿ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಕೆ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ನಿರ್ದೇಶಕ ಡಾ.ಮಾಧವ ಪೆರಾಜೆ, ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ, ರಘುಪ್ರಸಾದ್, ಅಮೃತ ನಾಯ್ಕ, ಡಾ.ಗಿರಿಜಾ ಬೋದೂರ ಇತರರಿದ್ದರು.