ಹೊಸಪೇಟೆಯಲ್ಲಿ ಶುಕ್ರವಾರ ಬಿಜೆಪಿಯಿಂದ ಪ್ರತಿಭಟನಾ ರ‌್ಯಾಲಿ ನಡೆಯಿತು. ನಗರಸಭೆ ಉಪಾಧ್ಯಕ್ಷ ಎನ್.ರೂಪೇಶ ಕುಮಾರ್, ಸದಸ್ಯರಾದ ಜೀವರತ್ನಂ, ಎಲ್.ಎಸ್.ಆನಂದ, ಮಂಡಲ ಅಧ್ಯಕ್ಷ ಕಸಾಟಿ ಉಮಾಪತಿ, ಪ್ರಮುಖರಾದ ಎಸ್.ಗಾಳೆಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ಶಂಕರ್ ಮೇಟಿ, ಜಗನ್ನಾಥ, ಹೊನ್ನೂರಪ್ಪ, ದೇವಲಾಪುರ ಚಂದ್ರು ಇತರರಿದ್ದರು. 
ಜಿಲ್ಲೆ

ಹೊಸಪೇಟೆಯಲ್ಲಿ ಕಾರ್ಯಕರ್ತರ ರ‌್ಯಾಲಿ

ಹೊಸಪೇಟೆ: ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತಪರ ಯೋಜನೆಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಪುನೀತ್ ರಾಜಕುಮಾರ್ ಸರ್ಕಲ್‌ನಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ವಿಶ್ವಜೀತ್ ಮೆಹತಾಗೆ ಮನವಿ ಸಲ್ಲಿಸಲಾಯಿತು.

ಹುಡಾ ಮಾಜಿ ಅಧ್ಯಕ್ಷ ಅಶೋಕ ಜೀರೆ ಮಾತನಾಡಿ, ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದೊಂದಿಗೆ ಬಿಜೆಪಿ ರಾಜ್ಯ ಸರ್ಕಾರ ವಾರ್ಷಿಕ ನಾಲ್ಕು ಸಾವಿರ ರೂ. ನೀಡುತ್ತಿತ್ತು.

ಜಿಲ್ಲೆಗೊಂದು ಗೋಶಾಲೆ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ತಡೆಹಿಡಿದಿರುವುದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಾರಿಯಲ್ಲಿದ್ದ ಎಲ್ಲ ಯೋಜನೆಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಮಳೆ ಅಭಾವ ಉಂಟಾಗಿರುವುದರಿಂದ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕು. ಲೋಡ್ ಶೆಡ್ಡಿಂಗ್ ರದ್ದುಪಡಿಸಿ ನಿರಂತರ ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.