ಜಿಲ್ಲೆ

ಬಿಜೆಪಿದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ

ಮಂಜುನಾಥ

ಹೊಸಪೇಟೆ: ಎಲ್ಲಾ ಸಕಲ ಜೀವ ರಾಶಿಗಳನ್ನೂ ಕಾಪಾಡುವ ಜವಾಬ್ದಾರಿ ನಮ್ಮ ಸರ್ಕಾರದ್ದಾಗಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಲಿಗಳಿಗೆ ವಿಷಪ್ರಾಷನ ಪ್ರಕರಣ ಈಗಾಗಲೇ ಅರಣ್ಯ ಇಲಾಖೆಯವರು ತನಿಖೆ ಮಾಡ್ತಿದ್ದಾರೆ. ವರದಿ ಬಂದ ಬಳಿಕ ಸತ್ಯ ಏನೆಂದು ನಾವು ನಿಮಗೆ ಹೇಳುತ್ತೇವೆ. ಬಿಜೆಪಿಯವರು ಯಾವಾಗಲೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ವಿಪಕ್ಷದಲ್ಲಿದ್ದು ಆರೋಪ ಮಾಡೋದೇ ಅವರ ಕೆಲಸ. ಮಾಡಲಿ ಬಿಡಿ ಎಂದರು.

ತುAಗಭದ್ರಾ ಜಲಾಶಯದ ಗೇಟ್ ಗಳ ಟೆಂಡರ್ ಕರಿಯಲಾಗಿದೆ. ಜಲಾಶಯ ಸುಭದ್ರವಾಗಿರಬೇಕು ಎಂದರೆ ಸರಿಯಾದ ಯೋಜನೆ ಹಾಗೂ ಗುಣಮಟ್ಟದಿಂದ ಕಾಮಗಾರಿ ನಡೆಯಬೇಕಿದೆ. ಆದಷ್ಟು ಬೇಗ ಗೇಟ್ ಅಳವಡಿಕೆ ಕಾರ್ಯ ಆಗಲಿದೆ ಎಂದರು.