ಹೊಸಪೇಟೆ: ಮದ್ಯ, ಧೂಮ, ವ್ಯಸನಗಳಿಗೆ ಯುವ ಪೀಳಿಗೆ ಬಲಿಯಾಗುವುದನ್ನು ತಡೆಯಲು ದೊಡ್ಡ ಜಾಗೃತಿ ಮಾಡಬೇಕು. ಆ ಮೂಲಕ ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಬಿಜೆಪಿ ಜಿಲ್ಲಾದ್ಯಕ್ಷ ಸಂಜೀವರೆಡ್ಡಿ ಹೇಳಿದರು.
ಕೊಟ್ಟೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿ ಮಹಾಶಕ್ತಿ ಕೇಂದ್ರದಿAದ ಪ್ರಧಾನಿ ಮೋದಿ ಜನ್ಮ ದಿನ ನಿಮಿತ್ತಆಯೋಜಿಸಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ನಮೋ ಯುವ ಮ್ಯಾರಥಾನ್ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಬಿಜೆಪಿಯಿಂದ ಎಲ್ಲ ಭಾಗದಲ್ಲಿ ನಡೆಯುತ್ತಿರುವ ಮ್ಯಾರಥಾನ್ ಕೇವಲ ಒಂದು ಓಟವಾಗಿಲ್ಲ. ದುಶ್ಚಟಗಳಿಗೆ ಬಲಿಯಾಗಿ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಯುವಜನಾಂಗವನ್ನು ಜಾಗೃತಿ ಗೊಳಿಸುವ ಕಾರ್ಯವಾಗಿದೆ. ದೇಶದ ಭವಿಷ್ಯವಾಗಿರುವ ಯುವಕರು ಸದೃಡರಾಗಿ ಮುನ್ನಡೆಯಬೇಕು. ಆದರೆ ಇಂದು ಅನೇಕ ಯುವಕರು ಮಧ್ಯ, ಧೂಮಪಾನಗಳಿಗೆ ದಾಸರಗಿ ವ್ಯಸನಕ್ಕೊಳಗಾಗುತ್ತಿದ್ದಾರೆ. ಬಿಜೆಪಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಮೂಲಕ ಯುವಜನರನ್ನು ಎಚ್ಚರಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಕೊಟ್ಟೂರು ಮಹಾಶಕ್ತಿ ಕೇಂದ್ರಅಧ್ಯಕ್ಷ ಪಂಪಾಪತಿಅAಗಡಿ ಮಾತನಾಡಿ, ಬಿಜೆಪಿ ಕೇವಲ ರಾಜಕೀಯಅಧಿಕಾರಕ್ಕಾಗಿ ಪ್ರಚಾರನಡೆಸದೇ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದೆ. ಪ್ರಧಾನ ಮಂತ್ರಿ ಮೋದಿಯವರುಜನ್ಮ ದಿನ ಪ್ರಯುಕ್ತ ನಶೆ ಮುಕ್ತ ಸಮಾಜಕಲ್ಪನೆಯೊಂದಿಗೆ ಸಪ್ತ ಪಾಕ್ಷಿಕಕಾರ್ಯ ಹಮ್ಮಿಕೊಂಡಿದೆ.ಇದರ ಮೂಲಕ ಕಿಂಚಿತ್ತಾದರೂ ಸಮಾಜಕ್ಕೆ ಒಳ್ಳೆಯ ಸೇವೆ ಮಾಡುವ ಮಹತ್ಕಾರ್ಯ ನಮ್ಮದಾಗಿದೆಎಂದರು.
ಹರಪನಹಳ್ಳಿ ರಸ್ತೆಯಲ್ಲಿನ ಶ್ರೀ ಮರಿಕೊಟ್ಟೂರೇಶ್ವರದೇಗುಲದಿಂದಬಸ್ ನಿಲ್ದಾಣ,ಮುಖ್ಯರಸ್ತೆ, ಉಜ್ಜಯಿನಿ ರಸ್ತೆಗಳಲ್ಲಿಮ್ಯಾರಥಾನ ನಡೆಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲ್ಲಾಹುಣ್ಸಿರಾಮಣ್ಣ, ಪ್ರಮುಖರಾದವಿಕ್ರಂ ನಂದಿ, ಕೆ.ಎಸ್.ಪ್ರಕಾಶ, ಕೃಷ್ಣನಾಯ್ಕ, ವೀರೇಶ್ವರ ಸ್ವಾಮಿ, ಪಿ.ಎಚ್.ಕೊಟ್ರೇಶ, ಜೋಗಿ ಹನುಮಂತಪ್ಪ, ಮಂಜುನಾಥ, ಜಿ.ಸಿದ್ಯಯ್ಯ, ತಿಪ್ಪೇಸ್ವಾಮಿ, ಶಾಂತಕ್ಕ, ಡಿ.ಉಮಾದೇವಿ, ಎಂ.ಪ್ರಸನ್ನ, ಅರವಿಂದ್ ಸುನಿಲ್ಕುಮಾರ್‌ಇತರರಿದ್ದರು.