ಜಿಲ್ಲೆ

ಬಿಜೆಪಿ ನಾಯಕರದ್ದು ತಿರುಕನ ಕನಸು

ಮಂಜುನಾಥ

ಹೊಸಪೇಟೆ : ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ವಿಚಾರದಲ್ಲಿ ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಬಳ್ಳಾರಿ ಸಂಸದ ಈ.ತುಕಾರಾಂ ಹೇಳಿದ್ದಾರೆ.

ಸಮಾಜಕಲ್ಯಾಣ ಇಲಾಖೆಯಿಂದ ಇಲ್ಲಿನ ಎಂ.ಪಿ.ಪ್ರಕಾಶ್ ನಗರದ ಬಳಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನೂತನ ಕಟ್ಟಡ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ- ಜೆಡಿಎಸ್ ನಾಯಕರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈ ಸರ್ಕಾರ ಸುಭದ್ರವಾಗಿದೆ. ಯಾವುದೇ ಸಮಸ್ಯೆ ಎದುರಾಗೋಲ್ಲಾ. ದೇವರಾಜು ಅರಸು ಅವರಾದ ಬಳಿಕ 5 ವರ್ಷ ಪೂರೈಸಿದ ಸಿಎಂ ಅದು ನಮ್ಮ ಸಿದ್ದರಾಮಯ್ಯ. ಅವರು ಎರಡನೇ ದೇವರಾಜ್ ಅರಸು. ಉತ್ತಮ ಸರ್ಕಾರ ನಮ್ಮದಾಗಿದ್ದು, ನಾವು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿ ಉತ್ತಮ ಆಡಳಿತ ಸರ್ಕಾರ ಅಂತ ಅನಿಸಿಕೊಂಡಿದ್ದೇವೆ. ಮುಂದೆನೂ ಮತ್ತೆ ನಾವೇ ಅಧಿಕಾರಕ್ಕೆ ಬರ್ತೆವೆ. ಅವರು ತಿರುಕನ ಕನಸು ಕಾಣುತ್ತಿರಲಿ ಎಂದರು.