ಹೊಸಪೇಟೆ: ನಗರದಲ್ಲಿನ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕಡಿವಾಣಕ್ಕಾಗಿ ಸಂಬAಧಿಸಿದ ಮಾಲಿಕರು ಜ.24 ರೊಳಗಾಗಿ ಬಿಡಾಡಿ ದನಗಳನ್ನು ಕಟ್ಟಿಕೊಳ್ಳದಿದ್ದಲ್ಲಿ ಗೋಶಾಲೆಗೆ ರವಾನಿಸಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಡೂರು ರಸ್ತೆ, ವಾಲ್ಮೀಕಿ ಸರ್ಕಲ್, ಎಪಿಎಂಸಿ ಸರ್ಕಲ್, ಬಳ್ಳಾರಿ ರಸ್ತೆ ವೃತ್ತ, ಚಿತವಾಡ್ಗಿ, ದೀಪಾಯನ ಶಾಲೆ ಮುಂಭಾಗ ಆವರಣ, ಆಕಾಶವಾಣಿ ಹತ್ತಿರ,ಅಶೋಕ ಬುಕ್ ಸ್ಟಾಲ್ ಬಳಿ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳು ರಸ್ತೆಗೆ ಅಡ್ಡಲಾಗಿ ಗುಂಪು ಗುಂಪಾಗಿ ಮಲಗುತ್ತಿರುವುದರಿಂದ ವಾಹನ ಸವಾರರಿಗೆ, ವಯೋವೃದ್ದರಿಗೆ, ಚಿಕ್ಕ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯುAಟಾಗುತ್ತಿದೆ. ಹಾಗೂ ಪ್ರಾಣಹಾನಿ ಸಂಭವಿಸುವ ಹಿನ್ನಲೆಯಲ್ಲಿ ಶೀಘ್ರವೇ ಬಿಡಾಡಿ ದನಗಳನ್ನು ಮಾಲಿಕರು ಕಟ್ಟಿಕೊಳ್ಳಲು ಸೂಚಿಸಲಾಗಿದೆ.