ಹೊಸಪೇಟೆ: ನಗರದ ಹೊರವಲಯದ ಜಂಬೂನಾಥಹಳ್ಳಿ, ಸಂಡೂರು ರಸ್ತೆ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದ ಜನರಲ್ಲಿ ಆತಂಕ ಮೂಡಿಸಿದ್ದ ಕರಡಿಯನ್ನು ಅರಣ್ಯ ಇಲಾಖೆಯು ಗುರುವಾರ ತಡರಾತ್ರಿ ಸೆರೆ ಹಿಡಿದಿದೆ.
ಜನವಸತಿ ಪ್ರದೇಶಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಕರಡಿ ಸಂಡೂರು ರಸ್ತೆಯಲ್ಲಿ ಮರವೇರಿ ಕುಳಿತಿತ್ತು. ಇದನ್ನು ಗಮನಿಸಿದ ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ದರ‍್ಘಾವಧಿಯಿಂದ ಈ ಕರಡಿ ಕುರಿತು ದೂರುಗಳು ಇದ್ದಿದ್ದರಿಂದ ಕೂಡಲೇ ಕರ‍್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಂಪಿ ಜೂ ನಿಂದ ಬಲೆ, ಪಂಜರ ಮತ್ತು ಪಶುವೈದ್ಯರನ್ನು ಕರೆಸಿ ಅರಿವಳಿಕೆ ಚುಚ್ಚುಮದ್ದು ನೀಡಿ ಮರದಲ್ಲಿಯೇ ಕರಡಿಯನ್ನು ಸೆರೆ ಹಿಡಿದು ಬೋನಿಗೆ ಹಾಕಿದರು. ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಕರ‍್ಯಾಚರಣೆ ನಡೆಸಿ ಕರಡಿಸೆರೆ ಹಿಡಿದ ಬಳಿಕ ಈ ಭಾಗದ ಜನರು ನಿಟ್ಟುಸಿರು ಬಿಟ್ಟರು.
ಕರಡಿಯನ್ನು ಸೆರೆ ಹಿಡಿದ ಬಳಿಕ ಅರಣ್ಯ ಇಲಾಖೆಯ ಕಚೇರಿ ಬಳಿ ತಂದಿರಿಸಿದ್ದು, ಆರೋಗ್ಯ ತಪಾಸಣೆ ನಡೆಸಿ ಹಂಪಿ ಜೂನಲ್ಲಿ ಕೆಲದಿನ ಉಪಚಾರ ನಡೆಸಿದ ಬಳಿಕ ಅರಣ್ಯಕ್ಕೆ ಬಿಡುವ ಕುರಿತು ನರ‍್ಧರಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಡಿಸಿಎಫ್ ಅನುಪಮಾ, ಹಂಪಿ ಮೃಗಾಲಯದ ಡಿಸಿಎಫ್ ಡಾ.ರಾಜೇಶ್ ನಾಯ್ಕ, ಎಸಿಎಫ್ ಭಾಸ್ಕರ್, ಆರ್‌ಎಫ್‌ಒ ಕೌಶಿಕ್ ಮರ‍್ಗರ‍್ಶನದಲ್ಲಿ ಎಆರ್‌ಎಫ್‌ಒ ರಾಮಲಿಂಗಪ್ಪ, ಅರಣ್ಯಪಾಲಕ ವೆಂಕಪ್ಪ, ಪಶುವೈದ್ಯಾಧಿಕಾರಿ ವಾಣಿಶ್ರೀ, ಮಹೇಂದ್ರ, ಪ್ರಕೃತಿ ಅವರು ಯಶಸ್ವಿ ಕರ‍್ಯಾಚರಣೆ ನಡೆಸಿದರು.