ಸಾಂಧರ್ಬಿಕ ಚಿತ್ರ 
ಜಿಲ್ಲೆ

ಹರವಿಬಸಾಪುರದಲ್ಲಿ ಆಕಸ್ಮಿಕ ಬೆಂಕಿಗೆ ಮೂರು ಬಣವೆಗಳು ಭಸ್ಮ

ಮಂಜುನಾಥ

ಹೂವಿನಹಡಗಲಿ:ತಾಲೂಕಿನ‌ ಹರವಿ ಬಸಾಪುರದಲ್ಲಿ ಶುಕ್ರವಾರ ಸಂಜೆ ಆಕಸ್ಮಿಕ‌ ಬೆಂಕಿ ತಗಲು ಮೂರು ಬಣವೆಗಳು ಸುಟ್ಟು ಬೂದಿಯಾಗಿವೆ.

ಗ್ರಾಮದ ಹಾವನೂರು ನಿಂಗಪ್ಪ, ಮೈಲಾರ ನಿಂಗಪ್ಪ ಅವರ ತಲಾ ಎರಡು ಟ್ರ್ಯಾಕ್ಟರ್ ಮೆಕ್ಕೆಜೊಳದ ಸೊಪ್ಪಿ, ಎರಡು ಟ್ರ್ಯಾಕ್ಟರ್ ಭತ್ತದ ಹುಲ್ಲು, ಯಲ್ಲವ್ವ ಅವರ ನಾಲ್ಕು ಟ್ರ್ಯಾಕ್ಟರ್ ಭತ್ತದ ಹುಲ್ಲು, ಎರಡು ಟ್ರ್ಯಾಕ್ಟರ್ ಮೆಕ್ಕೆಜೊಳದ ಸೊಪ್ಪಿ ಸೇರಿದಂತೆ ಪುಟ್ಟಪ್ಪ ಅವರ ಬಣವೆಗಳು ಸುಟ್ಟು ಕರಕಲಾಗಿವೆ. ಸ್ಥಳೀಯರು ಬೆಂಕಿ ನಂಧಿಸಲು ಪ್ರಯತ್ನಿಸಿದರಾದರೂ ಬೆಂಕಿ ಹೆಚ್ಚಾಗಿ ಆವರಿಸಿಕೊಂಡ ಕಾರಣ ಬಣವೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.