ಹೊಸಪೇಟೆ: ಭಾವೆಕ್ಯತೆ ಸಾರುವ ಹಾಗೂ ತ್ಯಾಗ, ಬಲಿದಾನದ ಪ್ರತೀಕವಾದ ಹಾಗೂ ಇಸ್ಲಾಂ ಹಬ್ಬಗಳಲ್ಲಿ ಪ್ರಮುಖವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಶುಕ್ರವಾರ ಸಡಗರ ಸಂಭ್ರಮದಿAದ ಆಚರಿಸಿದರು.
ನಗರದ ಈದ್ಗಾ ಮೆದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಒಟ್ಟಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶಾಂತಿ, ಸೌಹಾರ್ದತೆಗಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರವಲ್ಲದೇ ಜಿಲ್ಲೆಯಾದ್ಯಂತ ಬಕ್ರಿದ್ ಹಬ್ಬವು ಅಗತ್ಯ ವಸ್ತುಗಳ ಬೆಲೆಯೇರಿಕೆಯ ನಡುವೆಯೂ ಸಂತಸ, ಸಂಭ್ರಮದಿAದ ನೆರವೇರಿತು. ಪ್ರಾರ್ಥನೆ ಮುಗಿಸಿ ಬಂದ ನಂತರ ಹಿರಿಯರನ್ನು ಸ್ಮರಿಸಿದರು. ನಗರವಲ್ಲದೇ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳಲ್ಲಿ ಬಕ್ರಿದ್ ಅರ್ಥಪೂರ್ಣ ರೀತಿಯಲ್ಲಿ ನೆರವೇರಿತು. ಹಬ್ಬದ ಸಡಗರದಲ್ಲಿದ್ದ ಮುಸ್ಲಿಂ ಸಮುದಾಯದ ಜನರು ನೆರೆ, ಹೊರೆಯ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದರು.
ಹಬ್ಬದಲ್ಲಿ ವಿಶೇಷವಾಗಿ ಬಲಿ ಕೊಡುವ ಪದ್ಧತಿ ರೂಢಿಯಲ್ಲಿದೆ. ಬಲಿ ಕೊಡುವ ಪ್ರಾಣಿಗಳು ಆರೋಗ್ಯವಾಗಿಬೇಕು .ಪ್ರಾಣಿ ಮಾಂಸದಲ್ಲಿ 3 ಭಾಗ ಮಾಡಿ, ಒಂದು ಭಾಗವನ್ನು ಬಡವರಿಗೆ, ಇನ್ನೊಂದು ಭಾಗವನ್ನು ಬಂಧುಮಿತ್ರರಿಗೆ, ಉಳಿದ ಒಂದು ಭಾಗವನ್ನು ತಾವು ಉಪಯೋಗಿಸಿ ಕೊಳ್ಳುವ ಪದ್ಧತಿ ಬಕ್ರೀದ ಹಬ್ಬದ ವಿಶೇಷತೆಯಾಗಿದೆ.
ಹುಡ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ ಮಾತನಾಡಿ, ಜಿಲ್ಲೆಯ ಮುಸ್ಲಿಂ ಬಾಂಧವರು ಹೆಚ್ಚು ಉತ್ಸುಕತೆಯ ಜತೆಗೆ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಿದ್ದಾರೆ. ನಾಡಿಗೆ ಭಾವೆಕತೆ ಸಾರುವಂತ ಹಬ್ಬಗಳ ಆಚರಣೆಯಲ್ಲಿ ಇಸ್ಲಾಂ ಧರ್ಮ ಸೇರಿದಂತೆ ಬೇರೆ ಬೇರೆ ಧರ್ಮಗಳಲ್ಲಿ ಸಾಮಾಜಿಕ ಕಳಕಳಿ ಇರುವಂತ ಆಚರಣೆಗಳಿವೆ. ಅಂತಹ ಪ್ರಮುಖ ಆಚರಣೆ, ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ಒಂದು. ಇಂತಹ ಹಬ್ಬಗಳಲ್ಲಿ ಜಾತಿ-ಧರ್ಮ ಬಿಟ್ಟು ಎಲ್ಲ ವರ್ಗದ ಜನರು ಪಾಲ್ಗೊಂಡು ದೇವರಲ್ಲಿ ಪ್ರಾರ್ಥನೆ ಮಾಡಬೇಕು ಅದರಿಂದ ನಾಡಿನ ಸಮಸ್ತ ಜನತೆಗೆ ಒಳ್ಳೆಯದಾಗುತ್ತದೆ ಎಂದರು.