ಜಿಲ್ಲೆ

ಹಿನ್ನೀರು ಪ್ರದೇಶ ಕುಡುಕರ ತಾಣ

ಮಂಜುನಾಥ

ಹೊಸಪೇಟೆ: ಜಿಲ್ಲೆಯ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ತುಂಗಭದ್ರಾ ಹಿನ್ನೀರು ಪ್ರದೇಶವೂ ಒಂದು ಆಗಿದೆ. ಆದರೆ, ಈ ತಾಣದಲ್ಲಿ ಪಾನಮತ್ತರು, ಕೆಲ ಕಿಡಿಗೇಡಿಗಳ ಎಲ್ಲೆ ಮೀರಿದ ರ‍್ತನೆಯಿಂದ ಪ್ರವಾಸಿಗರು ಕುಟುಂಬ ಸಮೇತ ಹೋಗಲು ಹಿಂದೇಟು ಹಾಕುವಂತಾಗಿದೆ.

ತುಂಗಭದ್ರಾ ಜಲಾಶಯ, ಕ್ರಸ್ಟ್‌ಗೇಟ್‌ಗಳಿಂದ ಧುಮುಕುವ ನೀರು, ಉದ್ಯಾನ, ಕಾರಂಜಿ ಸಂಗೀತ, ಬೆಟ್ಟ-ಗುಡ್ಡ, ಸರ‍್ಯಾಸ್ತ ಹೀಗೆ ವಿವಿಧ ಆರ‍್ಷಣೆಗಳು ಪ್ರವಾಸಿಗರನ್ನು ತನ್ನತ್ತ ಸೆಳೆದರೆ, ಹಿನ್ನೀರು ಪ್ರದೇಶ ಕೂಡ ನಿರ‍್ಗಪ್ರಿಯರ ಮನಸ್ಸಿಗೆ ಮುದ ನೀಡುತ್ತದೆ. ಜಿಲ್ಲಾ ಕೇಂದ್ರದಿಂದ ಆರು ಕಿ.ಮೀ. ದೂರದಲ್ಲಿ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಕಾರು ಮತ್ತು ಬೈಕ್‌ಗಳಲ್ಲಿ ತಲುಪಬಹುದು. ಹಾಗಾಗಿ ಒಂದು ದಿನದ ಪ್ರವಾಸಕ್ಕೆ ಈ ಸ್ಥಳ ಹೇಳಿ ಮಾಡಿಸಿದಂತಿದೆ. ಸಹಜವಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ನೆರೆಯ ಕೊಪ್ಪಳ, ಬಳ್ಳಾರಿ, ಚಿತ್ರದರ‍್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪಿಕ್‌ನಿಕ್‌ಗೆ ಇಲ್ಲಿಗೆ ಬಂದು ಹೋಗುವವರಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಈ ಹಿನ್ನೀರು ಪ್ರದೇಶ ಅನೇಕರನ್ನು ತನ್ನತ್ತ ಸೆಳೆಯುತ್ತದೆ. ಆದರೆ, ಮದ್ಯಪ್ರಿಯರ ದರ‍್ವತ್ರನೆ ಹಾಗೂ ಪುಂಡರಿಗೆ ಕಡಿವಾಣ ಹಾಕಬೇಕಿದೆ.

ವಿರಮಿಸಲು ಕಿರಿಕಿರಿ

ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಮದ್ಯ ಪ್ರಿಯರು ಹಾಡಹಗಲೇ ಮದ್ಯ ಸೇವಿಸುತ್ತಾರೆ. ಇದರಿಂದ ಕುಟುಂಬ ಸಮೇತ ಬರುವವರಿಗೆ ಮುಜುಗರವಾಗುತ್ತದೆ. ಅಲ್ಲದೇ, ಯುವತಿಯರನ್ನು ಛೇಡಿಸುವುದು, ಅಸಭ್ಯವಾಗಿ ರ‍್ತಿಸುವುದು ಕೂಡ ನಡೆಯುತ್ತದೆ. ಪಾನಮತ್ತರು ಮದ್ಯದ ಬಾಟಲಿಗಳನ್ನು ಇಲ್ಲಿಯೇ ಬಿಸಾಡುವುದರಿಂದ ಪ್ರವಾಸಿಗರಿಗೆ ವಿರಮಿಸಲು ಕಿರಿಕಿರಿ ಆಗುತ್ತಿದೆ. ಆದ್ದರಿಂದ ಈ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಪ್ರವಾಸಿಗರು ಆಗ್ರಹಿಸಿದ್ದಾರೆ.

ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಪೊಲೀಸರು ಗಸ್ತಿನಲ್ಲಿ ಇರುತ್ತಾರೆ. ಯಾವುದೇ ರೀತಿಯಲ್ಲಿ ಮಧ್ಯಾಪಾನ ಮಾಡುವವರು ಕಂಡು ಬಂದಿಲ್ಲ. ಪ್ರವಾಸಿಗರಿಗೆ ತೊಂದರೆ ಆದರೆ, ಖಂಡಿತ ಕ್ರಮಕೈಗೊಳ್ಳುತ್ತೇವೆ. - ಮಲ್ಲೇಶ್ ದೊಡ್ಡಮನಿ, ಡಿವೈಎಸ್ಪಿ, ಕೂಡ್ಲಿಗಿ

ನಾವು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಇಲ್ಲಿಗೆ ಬರುತ್ತಿದ್ದೆವು. ನಮ್ಮಲ್ಲಿಗೆ ಬಂಧುಗಳು ಬಂದಾಗ ಕರೆದುಕೊಂಡು ಬಂದು ಇಲ್ಲಿಯ ಸೌಂದರ್ಯ ತೋರಿಸುತ್ತಿದ್ದೆವು. ದಿನಪೂರ್ತಿ ಇಲ್ಲಿಯೇ ಕಳೆದು ಖುಷಿಯಿಂದ ಮರಳುತ್ತಿದ್ದೆವು. ಆದರೆ ಈಗ ಈ ಪ್ರದೇಶಕ್ಕೆ ಬರಲು ಮುಜುಗರ ಆಗುತ್ತಿದೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕಿದೆ.

- ಚಂದ್ರು ಲೆಂಕಿ, ಕಮಲಾಪುರ