ಹೊಸಪೇಟೆಯಲ್ಲಿ ಶಾಸಕ ಎಚ್.ಆರ್.ಗವಿಯಪ್ಪಗೆ ಮಂಗಳವಾರ ದೇವರಾಜ ಅರಸು ತಾಲೂಕು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಂಘ ಮನವಿ ಸಲ್ಲಿಸಿತು. ಮುಖಂಡರಾದ ವೈ.ಯಮುನೇಶ್, ರವಿ ಶಂಕರ್ ದೇವರಮನೆ, ಶಿವ ಇತರರಿದ್ದರು. 
ಜಿಲ್ಲೆ

ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಆರ್ಥಿಕ ನೆರವು ಕೊಡಿಸಿ

ನರೇಶ್ ಕುಮಾರ್

ಹೊಸಪೇಟೆ: ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಶೀಘ್ರ ಸಾಲ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೇವರಾಜ ಅರಸು ತಾಲೂಕು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಂಘ ಮಂಗಳವಾರ ಶಾಸಕ ಎಚ್.ಆರ್.ಗವಿಯಪ್ಪಗೆ ಮನವಿ ಸಲ್ಲಿಸಿತು.

ಹಿಂದಿನ ಸರ್ಕಾರದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ನಾನಾ ಸಮುದಾಯಗಳಿಗೆ ಸಾಲ ಮಂಜೂರು ಮಾಡಲು ಫಲಾನುಭವಿಗಳ ಆಯ್ಕೆ ನಡೆದಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಯಿಂದ ತಡೆಯಾಜ್ಞೆ ನೀಡಲಾಯಿತು.

ಆದ್ದರಿಂದ ನಿಗಮದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಮಂಜೂರಾತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ವೈ.ಯಮುನೇಶ್, ರವಿ ಶಂಕರ್ ದೇವರಮನೆ, ಶಿವ ಇತರರಿದ್ದರು.