ಜಿಲ್ಲೆ

ಗ್ರೂಪ್ ‘ಬಿ’ ವೃಂದದ ಪರೀಕ್ಷೆ ಫೆ.03ಕ್ಕೆ

ಮಂಜುನಾಥ

ಹೊಸಪೇಟೆ : ವಿವಿಧ ಇಲಾಖೆಗಳ ಗ್ರೂಪ್ ಬಿ (ಹೈ.ಕ) ವೃಂದದ ಪರೀಕ್ಷೆಗಳು ಫೆ.23 ರಂದು ಸಾಮಾನ್ಯ ಪತ್ರಿಕೆ ಪರೀಕ್ಷೆ ಜರುಗಲಿದ್ದು ಸುವ್ಯವಸ್ಥಿತವಾಗಿ ನಡೆಸಲು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಪರೀಕ್ಷಾ ಆವರಣ ಸೇರಿದಂತೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳು ಅಳವಡಿಕೆ ಕಡ್ಡಾಯಗೊಳಿಸಿದ್ದು, ಪರೀಕ್ಷಾ ಕೆಂದ್ರದಲ್ಲಿ ಅಕ್ರಮಗಳು ನಡೆಯದಂತೆ ವೆಬ್ ಕ್ಯಾಮರಾಗಳ ಅಳವಡಿಕೆ ಮಾಡಬೇಕು. ಕೇಂದ್ರದೊಳಗೆ ಸ್ಮಾರ್ಟ್ ಪೋನ್ ಮತ್ತು ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ನಿಷೇಧಿಸಿಲಾಗಿದೆ. ಒಟ್ಟು ಐದು ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಿದ್ದು, ಸಮಯ ಪಾಲನೆಗಾಗಿ ಗೋಡೆ ಗಡಿಯಾರ ಮತ್ತು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷಾ ಪ್ರಕ್ರಿಯೆ ಮಾಹಿತಿಗಾಗಿ ಕಂಟ್ರೋಲ್ ರೂಂ ಸ್ಥಾಪಿಸಿ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಗಳನ್ನು ನಡೆಯದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.