ಹೊಸಪೇಟೆ: ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆಂಬ ದೂರಿನ ಮೇರೆಗೆ ಕನ್ನಡ ವಿವಿ ಸಹ ಪ್ರಾಧ್ಯಾಪಕ ಎಂ.ಮಲ್ಲಿಕಾರ್ಜುನಗೌಡ ವಿರುದ್ಧ ಕಮಲಾಪುರ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಪ್ರಾಧ್ಯಾಪಕ ಮಲ್ಲಿಕಾರ್ಜುನಗೌಡರನ್ನು ಕೂಡಲಸಂಗಮದ ಕನ್ನಡ ವಿವಿ ವಿಸ್ತರಣಾ ಕೇಂದ್ರಕ್ಕೆ ಅ.30 ರಂದು ವರ್ಗಾವಣೆಗೊಳಿಸಲಾಗಿತ್ತು. ನ.1ರಂದು ಶೈಲಜಾ ಎಂಬುವರು ಮುಖ್ಯಸ್ಥರ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಹದಿನೈದು ದಿನಗಳ ನಂತರ ಮಲ್ಲಿಕಾರ್ಜುನಗೌಡ ಅವರು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗಕ್ಕೆ ಬಂದು ಹಾಜರಾತಿ ಪುಸ್ತಕ, ಸೀಲ್ ತೆಗೆದುಕೊಂಡು ಹೋಗಿದ್ದಾರೆ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಕಮಲಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.