ಜಿಲ್ಲೆ

ಹೊಸಪೇಟೆ: ಬುದ್ಧಿ ಮಾತು ಹೇಳಿದ್ದಕ್ಕೆ ಚಾಕು ಇರಿತ

Vijayanagara - Veerendra

ಹೊಸಪೇಟೆ: ಅನುಚಿತವಾಗಿ ವರ್ತಿಸದಂತೆ ಬುದ್ದಿ ಮಾತು ಹೇಳಿದ ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಇಲ್ಲಿನ ಭಗತ್ ಸಿಂಗ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಭಗತ್ ಸಿಂಗ್ ನಗರ ನಿವಾಸಿ ರಾಜು(೨೦) ಗಾಯಗೊಂಡಿದ್ದು, ಅದೇ ಬಡಾವಣೆಯ ಕೆ.ನಾಗರಾಜ(೨೮) ಕೊಲೆಗೆ ಯತ್ನಿಸಿದ ಆರೋಪಿ. ನಾಗರಾಜ್ ಕೆಲ ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಸುಖಾ ಸುಮ್ಮನೆ ಹೇಳಿಕೊಂಡು ಓಡಾಡುತ್ತಿದ್ದ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜು, ಈ ರೀತಿ ನಡೆದುಕೊಳ್ಳದಂತೆ ಕೆಲ ದಿನಗಳಿಂದೆಯೇ ಎಚ್ಚರಿಕೆ ನೀಡಿದ್ದ. ಇದರಿಂದ ಕುಪಿತನಾಗಿದ್ದ ಆರೋಪಿ, ಶುಕ್ರವಾರ ರಾತ್ರಿ ಭಗತ್ ಸಿಂಗ್ ಬಡಾವಣೆ ಸಮೀಪದ ಕೆನಾಲ್ ಬಳಿ ಕುಳಿತಿದ್ದ ರಾಜು ಕತ್ತಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ತಕ್ಷಣ ದಾರಿ ಹೋಕರು ರಕ್ಷಣೆಗೆ ಬಂದಿದ್ದರಿAದ ರಾಜು ಅಪಾಯದಿಂದ ಪಾರಾಗಿದ್ದಾನೆ. ಬಳಿಕ ೧೦೦ ಬೆಡ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.