ಜಿಲ್ಲೆ

ಇಹಲೋಕ ತ್ಯಜಿಸಿದ ಕಲಾವಿದೆ ಹನುಮಕ್ಕ

ಹೊಸಪೇಟೆ: ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯೆ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕತೆ ರಂಗಭೂಮಿ ಕಲಾವಿದೆ ತಾಲೂಕಿನ ಮರಿಯ್ಮನಹಳ್ಳಿಯ ಡಿ.ಹನುಮಕ್ಕ (58) ಅನಾರೋಗದಿಂದ ಶುಕ್ರವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದರು. ಮರಿಯಮ್ಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಮರಿಯಮ್ಮನಹಳ್ಳಿಯಲ್ಲಿ 1967 ರಲ್ಲಿ ವೃತ್ತಿ ರಂಗಭೂಮಿ ಕಲಾವಿದ ಡಿ.ದುರ್ಗಾದಾಸ್ ಮತ್ತು ಡಿ.ಪಾರ್ವತಮ್ಮ ನಾಲ್ಕನೇ ಮಗಳಾಗಿ ಡಿ.ಹನುಮಕ್ಕ ಜನಿಸಿದರು. ಇವರ ಮನೆತನಕ್ಕೆ ಕಲೆ ವಂಶಪರAಪರೆಯಾಗಿ ಬಂದಿದ್ದು, ರಂಗಭೂಮಿಯ ನಂಟನ್ನು ಹೊಂದಿದ್ದಾರೆ. ಹೀಗಾಗಿ ರಂಗಭೂಮಿ ನಂಟು ಹನುಮಕ್ಕನವರಿಗೂ ಇತ್ತು.

ಹನುಮಕ್ಕನವರಿಗೆ ರಂಗಭೂಮಿಯ ಗೀಳು ಬಾಲ್ಯದಿಂದಲೂ ಇತ್ತು. 9ನೇ ತಗತಿಯವರೆಗೆ ಓದಿದ್ದು, ತನ್ನ ತಂದೆಯAತೆ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ನೀನಾಸಂಗೆ 1994 ರಲ್ಲಿ ಸೇರಿ, ಪ್ರತಿಭಾವಂತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು. ರಂಗಭೂಮಿಯ ದಿಗ್ಗಜರೊಡನೆ ಒಡನಾಟ ಹಾಗೂ ಘಟಾನುಘಟಿ ನಿರ್ದೇಶಕರು ನಿರ್ದೇಶಿಸಿರುವ ನಾಟಕಗಳಲ್ಲೂ ಉತ್ತಮ ಕಲಾವಿದೆಯಾಗಿ ಮಿಂಚಿದ್ದಾರೆ.

ಪAಚರಾತ್ರ, ತುಘಲಕ್, ವೆನಿಸಿನ ವರ್ತಕ, ಅಗ್ನಿ ಮತ್ತು ಮಳೆ, ಮಾಮ ಮೋಶಿ, ಮೀಡಿಯಾ, ಚಿರೆ ಬಂದೆ ವಾಡೆ, ಜತೆಗಿರುವನು ಚಂದಿರ, ಸ್ಮಶಾನ ಕುರುಕ್ಷೇತ್ರ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿ ಉತ್ತಮ ಕಲಾವಿದೆಯಾಗಿ ನಾಡಿನಾಧ್ಯಂತ ಹೆಸರು ಸಂಪಾಧಿಸಿದ್ದಾರೆ. ರಿಷಬ್ ಶೆಟ್ಟಿ ಪ್ರೊಡಕ್ಷನ್ ನ ರೂಪಾಂತರ, ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಶಿವರಾಜ ಕುಮಾರಗ ಅಭಿನಯದ ಭಜರಂಗಿ 2, ಹಲವಾರು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕುಬುಸ ಇವರ ಕೊನೆಯ ಚಿತ್ರವಾಯಿತು

2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಮುಂಬೈ ಕನ್ನಡ ಕಲಾ ಸಂಘ ಸ್ಪರ್ಧೆಯಲ್ಲಿ ಮತ್ತು ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಕನ್ನಡ ಕಲಾ ಸಂಘದ ಟಿ.ಪಿ.ಕೈಲಾಸಂ ಪ್ರಶಸ್ತಿ, ಕೊಟ್ಟೂರು ಮತ್ತು ಕೂಡ್ಲಿಗಿಯಲ್ಲಿ ರಂಗ ಗೌರವ, 2017ರಲ್ಲಿ ಹನುಮಕ್ಕ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಹನುಮಕ್ಕನವರು ಕನ್ನಡರಂಗಭೂಮಿಯ ಜೂನಿಯರ್ ಬಿ.ಜಯಶ್ರೀಯೆಂದೆ ಖ್ಯಾತರಾಗಿದ್ದ ಹನುಮಕ್ಕ, ತಮ್ಮ ಅನಾರೋಗ್ಯದ ಮುಂಚೆ ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಜನವರಿ ಕೊನೆಯಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಆ ವೇಳೆಗೆ ಅವರು ಬ್ರೆöÊನ್ ಸ್ಟೊçÃಕ್‌ಗೆ ತುತ್ತಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಸೃಷ್ಟಿಸಿರುವ ಸು ಫ್ರಂ ಸೋ ಹಾಗೂ ಕಾಂತಾರ 1 ಚಿತ್ರಕ್ಕು ಇವರು ಅಭಿನಯಿಸಬೇಕಿತ್ತು. ತಮ್ಮ ಕೊನೆಯ ಚಿತ್ರ ಕುಬುಸ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು, ಆದರೆ, ಅವರೆ ತಮ್ಮ ಚಿತ್ರವನ್ನು ವೀಕ್ಷಿಸಿದೇ ರಂಗನೇಪಥ್ಯ ಸೇರಿರುವುದು ನೋವಿನ ಸಂಗತಿಯಾಗಿದೆ.