ಹೊಸಪೇಟೆ: ಡಾ.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ನಿಮಿತ್ತ ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ಅಪ್ಪು ಅಭಿಮಾನಿಗಳಿಂದ ಸ್ಪೂರ್ತಿಯ ದಿನ ಆಚರಿಸಲಾಯಿತು.
ನಗರದಲ್ಲಿ ಅಪ್ಪು ಪ್ರತಿಮೆಗೆ ಹೂವಿನ ಅಲಂಕಾರ ಸೇರಿದಂತೆ ಪೂಜಾ ಕಾರ್ಯಕ್ರಮ ನಡೆದವು. ಅಭಿಮಾನಿಗಳು ಕೇಕ್ ಕತ್ತರಿಸಿ, ಅನ್ನದಾನ, ರಕ್ತದಾನ ಹಾಗೂ ಸಸಿ ನೆಡುವ ಮೂಲಕ ನೆಚ್ಚಿನ ನಾಯಕನ ಜನ್ಮದಿನವನ್ನು ಆಚರಿಸಿದರು. ಇನ್ನೂ ಕೆಲ ಕಡೆ ಅಭಿಮಾನಿಗಳು ನಾನಾ ಕಡೆ ಭಾವಚಿತ್ರ ಮೆರವಣಿಗೆ ಮಾಡಿದರು.
ಪುನೀತ್ ರಾಜಕುಮಾರ ಅಭಿಮಾನಿಗಳ ಬಳಗದಿಂದ ಆಯೋಜನೆ ಮಾಡಲಾಗಿದ್ದ ಅನ್ನ ಸಂತರ್ಪಣೆ ಚಾಲನೆ ಡಿವೈಎಸ್ಪಿ ಡಾ.ಟಿ.ಮಂಜುನಾಥ ಅವರು ನೀಡಿದರು. ಪುನೀತ್ ಅವರಿಗೆ ಇಷ್ಟವಾದ ಅಡುಗೆ ನಾನವೆಜ್ ಮತ್ತು ಖುಷ್ಕ ಹಾಗೂ ಬದನೆಕಾಯಿ ಪಲ್ಯ ರೈಸ್ ಬಾತ್ ಸೇರಿದಂತೆ ವಿಧ ವಿಧದ ಅಡಿಗೆ ಮಾಡಿ ಉಣಬಡಿಸಿದರು. ಅಭಿಮಾನಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೋಜನ ಸವಿದರು.