ಹೊಸಪೇಟೆ: ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಈಗಾಗಲೇ ಸಲ್ಲಿಸಿದ್ದ ಅರ್ಜಿಗಳಲ್ಲಿ ಅಪೂರ್ಣಗೊಂಡ ಅರ್ಜಿಗಳನ್ನು ಮರು ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವ ವೇಳೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಬಹುತೇಕರ ಅರ್ಜಿಗಳಲ್ಲಿ ಭಾವಚಿತ್ರ, ಸಹಿ ಮತ್ತು ದಾಖಲೆಗಳ ಮಾಹಿತಿ ಸಲ್ಲಿಕೆ ಅಪೂರ್ಣಗೊಂಡಿವೆ. ಹಾಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲು 2025ರ ಜ.05 ರವರೆಗೆ ಮರು ಅರ್ಜಿ ಪೂರ್ಣವಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಅನ್‌ಲೈನ್ ವೈಬ್‌ಸೈಟ್: hಣಣಠಿs://ಞಚಿಡಿಟಿemಚಿಞಚಿoಟಿe.ಞಚಿಡಿ.ಟಿiಛಿ.iಟಿ/ಚಿbಛಿಜ/ ನಲ್ಲಿ ಅರ್ಜಿ ಪೂರ್ಣಗೊಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.