ಹೊಸಪೇಟೆ: ಮಾಜಿ ಸಚಿವ ಆನಂದ್ ಸಿಂಗ್ ಅವರ ಜನ್ಮದಿನದ ನಿಮಿತ್ತ ಅಭಿಮಾನಿಗಳಿಂದ ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ವಿವಿಧ ಕಡೆ ವಿಶೇಷ ಪೂಜೆ ಸಲ್ಲಿಸಿದರು. ಹಾಗೂ ಅನ್ನ ಸಂತರ್ಪಣೆ ಮತ್ತು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು.
ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದಿಂದ ಹಂಪಿಯಲ್ಲಿ ಶ್ರೀ ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಮಾಳಗಿ, ವಿ.ಗೋಪಾಲ್, ರಾಮಕೃಷ್ಣ, ಶಿವಕುಮಾರ್, ಈರಣ್ಣ ಪೂಜಾರಿ, ಸೋಮೇಶ್, ಪರಶುರಾಮ್, ಸುರೇಶ್ ಎಚ್., ರಘು ವಿ., ನಾಗರಾಜ್, ಮಂಜುನಾಥ್. ಶರೀಫ್, ರಾಮ್, ಮಲ್ಲಿ ಇದ್ದರು.
ನಗರದ ಬಿಜೆಪಿ ಮಂಡಲದಿAದ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸಿದ್ಧಾರ್ಥ್ ಸಿಂಗ್ ಹಾಗೂ ಆನಂದ್ ಸಿಂಗ ಅಭಿಮಾನಿಗಳಿಂದ ನಗರದ ಭಟ್ರಳ್ಳಿ ಆಂಜನೇಯ ದೇಗುಲದಲ್ಲಿ ಹೋಮ, ವಿಶೇಷ ಪೂಜೆ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಅಯ್ಯಾಳ್ಳಿ ತಿಮ್ಮಪ್ಪ, ಅಶೋಕ್ ಜಿರೇ, ಸಾಲಿಸಿದ್ಧಯ್ಯಸ್ವಾಮಿ, ನಗರಸಭೆ ಸದಸ್ಯರಾದ ಎಲ್.ಎಸ್.ಆನಂದ, ಜೀವರತ್ನಂ ಮತ್ತು ನಾಗೇಂದ್ರ, ಮಧುರಚೆನ್ನ ಶಾಸ್ತ್ರಿ, ಆರ್.ನಾಗರಾಜ್, ಹೊನ್ನೂರಪ್ಪ, ನಟರಾಜ್, ಚೌಡಪ್ಪ, ರಾಘವೇಂದ್ರ, ಕಳಕನಗೌಡ, ಮಹೇಶ, ಉಮಾ, ಪೂರ್ಣಿಮಾ, ರೇಣುಕಮ್ಮ, ಮಹಾದೇವಿ, ವಿ.ಸಂಧ್ಯಾ, ಹೊಸೂರಮ್ಮ, ವೈ.ರೇಣುಕಮ್ಮ, ಭಾರತಿ ಕುಡುತಿನಿ, ಲಲಿತಾ, ಸುನೀತಾ ಸೇರಿ ಇತರರಿದ್ದರು.