ಹೊಸಪೇಟೆ: ಎಂಸಿಟಿಎಸ್ ಪ್ರೊತ್ಸಾಹ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ನಗರದಲ್ಲಿ ಡಿಎಚ್‌ಒ ಡಾ.ಶಂಕರ್ ನಾಯ್ಕಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯ ಸ್ತಂಭಗಳೆAದು ಕರೆಯಲಾಗುತ್ತದೆ. ಏಕೆಂದರೆ ಹಗಲಿರುಳು ಸಮಾಜದ ಸ್ವಾಸ್ಥ್ಯಕ್ಕಾಗಿ, ತಾಯಿ ಮಗುವಿನ ಆರೋಗ್ಯಕ್ಕಾಗಿ ಅವರು ದುಡಿಯುತ್ತಿದ್ದಾರೆ. ಆದರೆ ಅವರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಕಳೆದ ಮೂರು ತಿಂಗಳಿನಿAದ ಎಂಸಿಟಿಎಸ್ ಪ್ರೋತ್ಸಾಹ ಧನ (ಇನ್ಸೆಟಿವ್) ಬರದೆ ಆಶಾ ಕಾರ್ಯಕರ್ತೆಯರ ಆರ್ಥಿಕ ಪರಿಸ್ಥಿತಿ ಕಡು ಕಷ್ಟವಾಗಿದೆ. ಎ.ಎನ್.ಸಿ. ಪಿ.ಎನ್.ಸಿ, ಎಂ.ಆರ್01 ಮತ್ತು02 ಇನ್ನಿತರ ಅನೇಕ ಕಾಂಪೋನೆAಟ್‌ಗಳನ್ನು ಪೋರ್ಟಲ್ ಮೂಲಕ ತುಂಬಿದ್ದರೂ, ವೆರಿಫಿಕೇಷನ್‌ಗೆ ತೋರಿಸುತ್ತಿಲ್ಲ. ಇದರಿಂದಾಗಿ ಸಾವಿರಾರು ರೂಪಾಯಿಗಳು ಆಶಾ ಕಾರ್ಯಕರ್ತೆಯರಿಗೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೆ ಈ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವೆಂದರೆ ದೊಡ್ಡ ಮಟ್ಟದ ಹೋರಾಟ ಬೆಳೆಸುವುದು ಅನಿವಾರ್ಯವಾಗುತ್ತದೆ ಎಂದರು.
ಸAಘದ ರಾಜ್ಯ ಉಪಾಧ್ಯಕ್ಷೆ ಎ.ಶಾಂತಾ ಮಾತನಾಡಿ, ಆಶಾ ಕಾರ್ಯಕರ್ತರಿಗೆ ಅವರದಲ್ಲದ ಕೆಲಸಗಳಾದ ಕಫ ತರುವುದು, ವ್ಯಾಕ್ಸೀನ್ ಕ್ಯಾರಿಯರ್ ತರವುದು ಇನ್ನಿತರ ಕೆಲಸಗಳನ್ನು ಹೇರುತ್ತಾ, ಅವರನ್ನು ಒತ್ತಡಕ್ಕೆ ಸಿಲುಕಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಅನೇಕ ಸುತ್ತೋಲೆ ಈ ಕುರಿತು ಬಂದಿವೆ. ಆದರೂ ಈ ಸಮಸ್ಯೆ ಹಾಗೆ ಮುಂದುವರೆದಿದೆ. ಜಿಲ್ಲಾ ಪಂಚಾಯತ್ ಸಿಇಓ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ಕರೆಯಬೇಕೆಂಬ ಆದೇಶವಿದ್ದರೂ, ಇದು ಕಾರ್ಯಗತವಾಗುತ್ತಿಲ್ಲ ಎಂದರು.
ಉಪಾಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ಕೆ.ಎಸ್.ಗೌರಮ್ಮ, ಪ್ರಮುಖರಾದ ಮಹೇಶ್ವರಿ, ಮಂಗಳಾ, ನಾಗಮ್ಮ, ಸ್ಪೂರ್ತಿ, ಚೆನ್ನಮ್ಮ ಇತರರಿದ್ದರು.