ಹೊಸಪೇಟೆ: ದೇಶದ ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯ ಮೌಲ್ಯಗಳಿಂದ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಿಂದ ಶೋಷಣೆ ಅನುಭವಿಸುತ್ತಿದ್ದಾರೆ ಎಂದು ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಹೇಳಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿAದ ನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಮಾತನಾಡಿರು.
ಮಹಿಳೆಯರಿಗೆ ವಿಮುಕ್ತಿಯನ್ನು ಯಾರೂ ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ. ಅದನ್ನು ಹೋರಾಟದ ಮೂಲಕ ಪಡೆಯಬೇಕು. ದೇಶದ ಸ್ವಾತಂತ್ರ‍್ಯ ಚಳುವಳಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದ ಪರಂಪರೆಯನ್ನು ಮುಂದುವರೆಸುವ ಅವಶ್ಯಕತೆಯಿದೆ. ಮಹಿಳಾ ವಿಮುಕ್ತಿ ಮಹಿಳೆಗೆ ಮಾತ್ರ ಸೀಮಿತವಲ್ಲ, ಒಟ್ಟು ನಾಗರಿಕತೆ ಬೆಳವಣಿಗೆಯ ಸಂಕೇತ ಎಂದರು.
ಎಐಎAಎಸ್ ಎಸ್ ಸಂಘಟನೆಯ ರಾಜ್ಯಾಧ್ಯಕ್ಷೆ ಎಂ.ಎನ್.ಮAಜುಳಾ ಮಾತನಾಡಿ, ವಿಜಯನಗರ ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗವನ್ನರಸಿ ವಲಸೆ ಹೋಗುವವರ ಪ್ರಮಾಣ ಅಧಿಕವಾಗಿದೆ. ಸ್ಥಳೀಯ ಕಾರ್ಖಾನೆಗಳು ಮಹಿಳೆಯರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ವಿಫಲವಾಗಿವೆ. ರಾಷ್ಟಿçÃಯ ಕುಟುಂಬ ಆರೋಗ್ಯ ಸಮೀಕ್ಷೆ 5 ರನ್ವಯ 15 ರಿಂದ 49 ವಯೋಮಾನದ ಮಹಿಳೆಯರಲ್ಲಿ 47.5 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಪ್ರತ್ಯೇಕ ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳಂತಹ ಮೂಲಭೂತ ಸೌಲಭ್ಯಗಳು ಇಲ್ಲದೆ ಹೀನಾಯ ಸ್ಥಿತಿಯಲ್ಲಿವೆ. ಪ್ರಸವ ನಂತರದ ಸಾವು, ಹಸುಳೆಗಳ ಸಾವು ಹೆಚ್ಚಾಗುತ್ತಿರುವುದು ಆತಂಕಕಾರಿ ಸುದ್ದಿಯಾಗಿದೆ. ಇತ್ತೀಚಿನ ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿಯಲ್ಲಿನ ಬಾಣಂತಿಯರ ಮತ್ತು ಮಕ್ಕಳ ಸಾವೇ ಇದಕ್ಕೆ ಸಾಕ್ಷಿ. ಈ ಹಿನ್ನಲೆಯಲ್ಲಿ ಮಹಿಳೆಯರ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಒತ್ತಾಯಿಸಿದರು.
ಸಂಘಟನೆಯ ನೂತನ ಜಿಲ್ಲಾ ಸಮಿತಿ ರಚಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಶಿವಮ್ಮ, ಕಾರ್ಯದರ್ಶಿಯಾಗಿ ಮಂಜುಳಾ ಡೊಳ್ಳಿ, ಪದಾಧಿಕಾರಿಗಳಾಗಿ ಯಶೋಧಾ, ಮಹೇಶ್ವರಿ, ಸಹನಾ, ಮಾನಸಾ, ಗಾಯತ್ರಿ, ಪ್ರಮೀಣಾ, ನಂದಿನಿ, ಹುಲುಗೆಮ್ಮ ಆಯ್ಕೆಯಾದರು.