ಹೊಸಪೇಟೆ: ಸ್ವಾತಂತ್ರö್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಧೀರ ಹುತಾತ್ಮ ಭಗತ್‌ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಅವರ ಹುತಾತ್ಮ ದಿನಾಚರಣೆ ನಿಮಿತ್ತ ಎಐಡಿಎಸ್‌ಓ ಮತ್ತು ಎಐಡಿವೈಓ ಸಂಘಟನೆಗಳಿAದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬಲಿದಾನ ದಿವಸ್ ಆಚರಿಸಲಾಯಿತು.
ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಪಂಪಾಪತಿ ಮಾತನಾಡಿ, ಭಗತ್ ಸಿಂಗ್ ಹೇಳಿದ ಹಾಗೇ ಯಾವ ಕ್ರಾಂತಿ ಜನತೆಗೆ ಸ್ವಾತಂತ್ರö್ಯವನ್ನು ತಂದು ಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ಯುವ ಜನರು ದೇಶದ ಮೂಲೆ ಮೂಲೆಗೂ ಒಯ್ಯಬೇಕು. ಕೋಟ್ಯಾಂತರ ಮರ್ದಿತ ಜನರಿಗೆ ತಲುಪಿಸಬೇಕು. ಬಂಡವಾಳಶಾಹಿ ಮತ್ತು ಸಾಮ್ರಾಜ್ಯವಾದದ ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ ಎಂದು.
ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಪಿ.ಕಿರಣ್ ಮಾತನಾಡಿ, ದೇಶದಲ್ಲಿ 7 ಸಾವಿರಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಶಿಕ್ಷಣ ಆರೋಗ್ಯವನ್ನು ವ್ಯಾಪಾರ ಮಾಡಲಾಗುತ್ತಿದೆ. ನಿರುದ್ಯೋಗಿಗಳ ಬಹುದೊಡ್ಡ ಸೈನ್ಯವೇ ಸೃಷ್ಟಿಯಾಗಿದೆ. ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಐದು ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಭಗತ್ ಸಿಂಗ್ ರವರ ಕನಸಿನ ಸಮಾಜವಾದಿ ಭಾರತವನ್ನು ನಿರ್ಮಿಸಿ ಮಾನವನಿಂದ ಮಾನವನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಲು ವಿದ್ಯಾರ್ಥಿ ಯುವ ಜನರು ಮುಂದೆ ಬರಬೇಕಿದೆ. ಅವರ ಕನಸನ್ನು ನನಸಾಗಿಸುವ ದಾರಿಯಲ್ಲಿ ಅವರ ಉತ್ತರಾಧಿಕಾರಿಗಳಾಗಿ ವಿದ್ಯಾರ್ಥಿಗಳು, ಯುವಜನರು ಮುನ್ನಡೆಯುವುದು ತುರ್ತು ಅವಶ್ಯಕವಾಗಿದೆ ಎಂದರು.